ಬ್ರಹ್ಮಾವರ: ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕರ್ಣೆ ಇದರ ಪ್ರಧಾನ ಕಛೇರಿ ಮತ್ತು ಕೊಕ್ಕರ್ಣೆ ಶಾಖೆಯ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ವೇ.ಮೂ.ಬಿ ಸೀತಾರಾಮ ಅಡಿಗ ಹಲುವಳ್ಳಿಯವರ ಪೌರೋಹಿತ್ಯದಲ್ಲಿ ದಿನಾಂಕ 08.05.2026 ಶುಕ್ರವಾರದಂದು ನೆರವೇರಿತು. ಹಿರಿಯ ಸದಸ್ಯರಾದ ಗಿರೀಶ ಉಡುಪ ಕೋಟಿಂಬೈಲು, ಹೀರಾ ಶ್ರೀನಿವಾಸ ಹೆಗ್ಡೆ ಕೊಕ್ಕರ್ಣೆ, ಅನಂತಯ್ಯ ಶ್ಯಾನುಭಾಗ್ ಕೊಕ್ಕರ್ಣೆ, ಸಿ.ಎ ರಘುರಾಮ್ ಎಮ್.ಹೆಚ್ “ಪಂಚಾಕ್ಷರಿ ಕ್ಯಾಶೂಸ್” ಬೈದೆಬೆಟ್ಟು, ಆನಂದ ನಾಯ್ಕ ಗೌರಿಬೆಟ್ಟು ಕೊಕ್ಕರ್ಣೆ, ಆನಂದ ನಾಯ್ಕ ಸಂತೆಕಟ್ಟೆ, ಕೃಷ್ಣ ಪೂಜಾರಿ ಮಾರಾಳಿ ಗರಡಿ ಮತ್ತು ಕೃಷ್ಣ ಕುಲಾಲ ಅವರ್ಸೆ ಇವರು ಶಿಲಾನ್ಯಾಸಗೈದರು.
ಸಂಘದ ಅಧ್ಯಕ್ಷರಾದ ಶ್ರೀ ಬಿ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ ಹಾಗೂ ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ ವಂಡಾರು, ಎಲ್ಲಾ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿಗಳು, ಸದಸ್ಯರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

