ಕುಂದಾಪುರ: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ 2025-26ನೇ ಸಾಲಿನ ವಾರ್ಷಿಕ ಆದಾಯ 85 ಕೋಟಿ ರೂ. ಆಗಿದೆ.
ಕಳೆದ ಸಾಲಿಗಿಂತ 13 ಕೋಟಿ ರೂ. ಹೆಚ್ಚಳವಾಗಿದೆ. 2023-24ರಲ್ಲಿ 68 ಕೋಟಿ, 2024-25ರಲ್ಲಿ 71 ಕೋಟಿ ರೂ. ಆಗಿದ್ದು, 2025-26ರಲ್ಲಿ ದಾಖಲೆಯ ಆದಾಯ ಬಂದಿದೆ ಎಂದು ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

