Author: Karavali TV

ಬ್ರಹ್ಮಾವರ, ಆ.1: ಹಂದಾಡಿ ಗ್ರಾಮದ ಗುಡ್ಡಿ ಬಾರ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿ, ನಗದು ಸೇರಿದಂತೆ ಜುಗಾರಿ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಮಣೂರು ಗ್ರಾಮದ ಕುಶಾಲ್ ಶೆಟ್ಟಿ ಎಂದು ಗುರುತಿಸಲಾಗಿದೆ. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜುಗಾರಿ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಪಿಎಸ್‌ಐ ಮುಕ್ತಾಬಾಯಿ ಅವರು ಠಾಣಾ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ದಾಳಿ…

Read More

ಮಂಗಳೂರು/ಉಡುಪಿ: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ ಒಂದು ವಾರಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಇಡೀ ಕರಾವಳಿ ಪ್ರದೇಶದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಶನಿವಾರ (ಆಗಸ್ಟ್ 01) ಎಚ್ಚರಿಕೆ ನೀಡಿದೆ. ಮಲೆನಾಡಿನಲ್ಲೂ ವರುಣನ ಆರ್ಭಟ – ಶಾಲಾ-ಕಾಲೇಜುಗಳಿಗೆ ರಜೆ ಕರಾವಳಿಯ ಜೊತೆಗೆ ಮಲೆನಾಡು ಭಾಗಗಳಾದ ಚಿಕ್ಕಮಗಳೂರು,…

Read More

ಉಡುಪಿ: ರಸ್ತೆ ದಾಟುತ್ತಿದ್ದ ವೇಳೆ ಬಸ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಗರದ ನೈವೇದ್ಯ ಹೋಟೆಲ್ ಸಮೀಪದ ಲಯನ್ಸ್ ಸರ್ಕಲ್ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ.ಮೃತರನ್ನು ಬಿಜೆಪಿ‌ ಮುಖಂಡ ಮಂಜುಕೊಳ ಪತ್ನಿ, ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದು ಉಡುಪಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ತನಿಖೆ ಆರಂಭಿಸಿದ್ದಾರೆ.…

Read More

ಕುಂದಾಪುರ: ನಿನ್ನೆ ಬೆಳ್ಳಂಬೆಳಗ್ಗೆ ಕರಾವಳಿಯನ್ನೇ ಬೆಚ್ಚಿ ಬೀಳಿಸಿದ್ದ ಶೂಟ್ ಔಟ್ ಪ್ರಕರಣದ ಪ್ರಮುಖ ಆರೋಪಿ ಡೆರಿಕ್ ಕ್ರಾಸ್ತಾ ಎಂಬುವನನ್ನು ಪೊಲೀಸರು ಅರೆಸ್ಟ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆರೋಪಿಯ ಪತ್ತೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಅವರ ನೇತೃತ್ವದಲ್ಲಿ ಡೆರಿಕ್ ಕ್ರಾಸ್ತಾ ಪತ್ತೆಗೆ 3 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು, ಇದೀಗ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಜುಲೈ 30ರ ರಾತ್ರಿ 11:45ರಿಂದ 1:00 ಗಂಟೆಯ ಅವಧಿಯಲ್ಲಿ…

Read More

ನವದೆಹಲಿ: ವಾಣಿಜ್ಯ ಬಳಕೆಯ ಅಡುಗೆ ಅನಿಲ (LPG) ಬಳಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಭಾರಿ ಸಿಹಿ ಸುದ್ದಿ ನೀಡಿದ್ದು, 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ ₹200ಕ್ಕೂ ಹೆಚ್ಚು ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ದೆಹಲಿಯಲ್ಲಿ ಸಿಲಿಂಡರ್ ಬೆಲೆ ₹202 ಹಾಗೂ ಕೋಲ್ಕತ್ತಾದಲ್ಲಿ ₹209 ಇಳಿಕೆಯಾಗಿದೆ. ಈ ಬೆಲೆ ಪರಿಷ್ಕರಣೆಯ ಬಳಿಕ ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹2,872.50ಕ್ಕೆ ತಲುಪಿದೆ ಎಂದು…

Read More

​ಕೋಟ: ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಮಾವಿನಕಟ್ಟೆಯ ನಿವಾಸಿ ಭಾರತಿ ಎಂಬುವವರ ಮನೆಯ ಗೋದ್ರೇಜ್‌ನಲ್ಲಿದ್ದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ 320 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ. ಜೂನ್ 01 ರಂದು ಮದುವೆ ಕಾರ್ಯಕ್ರಮಕ್ಕೆ ತೆರಳಿ ಬಂದಿದ್ದ ಭಾರತಿಯವರು ತಮ್ಮ ಬಳೆಯಲ್ಲಿದ್ದ 7 ಚಿನ್ನದ ಬಳೆಗಳು, 7 ಉಂಗುರಗಳು, 7 ಜೊತೆ ಕಿವಿ ಓಲೆ, 1 ಜೊತೆ ಜುಮುಕಿ, 3 ಬ್ರೇಸ್‌ಲೇಟ್, ಕರಿಮಣಿ ಸರ,…

Read More

ಉಡುಪಿ: ಸಮಾಜದ ಅಭಿವೃದ್ಧಿಗೆ ಕೇವಲ ಸರ್ಕಾರಿ ಯೋಜನೆಗಳು ಅಥವಾ ಕಾಯ್ದೆಗಳು ಮಾತ್ರ ಸಾಲದು; ಅದರೊಂದಿಗೆ ನಿಸ್ವಾರ್ಥ ಮನೋಭಾವದ ಜನಸೇವಕರ ಪರಿಶ್ರಮವೂ ಅತ್ಯಗತ್ಯ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುತ್ತಾ ಉಡುಪಿ ಜಿಲ್ಲೆಯಾದ್ಯಂತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಯುವ ನಾಯಕನೇ ಸಂದೀಪ್ ಅಮೀನ್ ಕೂರಾಡಿ. ತಮ್ಮ ಸಮಾಜ ಸೇವೆಯ ಮೂಲಕ ಇವರು ಸಮಾಜಕ್ಕೆ ನಂದಾದೀಪವಾಗಿದ್ದಾರೆ. 43ಕ್ಕೂ ಹೆಚ್ಚು ಬಾರಿ ಸ್ವಯಂಪ್ರೇರಿತ ರಕ್ತದಾನ ವಿಜ್ಞಾನ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರಕ್ತವನ್ನು…

Read More

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಗ್ರಾಮದ ಕೇವಳದಲ್ಲಿ ಮಳೆಗಾಳಿಯ ಆರ್ಭಟಕ್ಕೆ ವ್ಯಕ್ತಿಯೊಬ್ಬರು ದುರ್ಮರಣ ಹೊಂದಿದ್ದಾರೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ 66 ವರ್ಷದ ಯಾದವ ಗೌಡ ಅವರ ಮೇಲೆ ಏಕಾಏಕಿ ಅಡಿಕೆಮರ ಮುರಿದು ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಳೆ ಮತ್ತು ಬಿರುಗಾಳಿಯಿಂದ ಈ ದುರ್ಘಟನೆ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಗಣೇಶ್ ಸವಣೂರ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ…

Read More

ಮಂಗಳೂರು: ಬಾಲಿವುಡ್‌ನ ‌ಬಹುನಿರೀಕ್ಷಿತ ಚಿತ್ರ ರಾಮಾಯಣದ ಟ್ರೈಲರ್ ‌ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಇದರಲ್ಲಿ ಸ್ಯಾಂಡಲ್‌ವುಡ್ ನಟ ಯಶ್ ಅವರು ರಾವಣನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿಪಲ್ಲವಿ, ರಾಮನ ಪಾತ್ರದಲ್ಲಿ ರಣಬೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟ ಯಶ್ ಅವರ ರಾವಣ ಪಾತ್ರ ಟ್ರೈಲರ್‌ನಲ್ಲಿಯೇ ಧೂಳೆಬ್ಬಿಸಿದೆ. ‍ಅವರ ನಟನೆಗೆ ವೀಕ್ಷಕರು ಬಹುಪರಾಕ್ ಎಂದಿದ್ದಾರೆ. ಆದರೆ ಈ ಚಿತ್ರದಲ್ಲಿ ಕಾಸ್ಟಿಂಗ್ ಸರಿಯಾಗಿಲ್ಲ ಎನ್ನುವ ಅಭಿಪ್ರಾಯ ಹಲವರದ್ದು. ರಾಮನ ಪಾತ್ರಕ್ಕೆ ರಣಬೀರ್ ಬದಲು…

Read More

ಮಂಗಳೂರು: ಹನ್ನೊಂದು ವರ್ಷಗಳ ಹಿಂದೆ ನಗರದ ಆಕಾಶಭವನದ ಸಮೀಪ ನಡೆದ ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದ ಹಾಗೆ ತಲೆಮರೆಸಿಕೊಂಡ ಮುಖ್ಯ ಆರೋಪಿಯನ್ನು ಹಾವೇರಿ ಜಿಲ್ಲೆಯ ಚಿಕ್ಕೆರೂರಿನಲ್ಲಿ ನಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕರ್ನೇಳ್ಳಿ ಗ್ರಾಮದ ಸಂತೋಷ್ ಎಸ್. (34) ಎಂದು ಗುರುತಿಸಲಾಗಿದೆ. ಕಾವೂರು ಠಾಣಾ ವ್ಯಾಪ್ತಿಯ ಆಕಾಶಭವನದಲ್ಲಿ 2015 ರಲ್ಲಿ ನಡೆದ ಘಟನೆ ಇದಾಗಿದ್ದು, ಮದರಂಗಿ ಕಾರ್ಯಕ್ರಮವೊಂದರಲ್ಲಿ ‌ಕೊಲೆಯತ್ನ ನಡೆದಿತ್ತು. ಅಶೋಕ್ ಕುಮಾರ್…

Read More