ಹೌದು ಭೂಕಂಪ ಸಂಭವಿಸುವುದಕ್ಕೂ ಮೊದಲು ಹೀಗೊಂದು ಘಟನೆ ನಡೆಯುತ್ತದೆ ಎನ್ನುವ ಅರಿವು ಪ್ರಾಣಿ ಪಕ್ಷಿಗಳಿಗೆ ಸಿಗುತ್ತದಂತೆ.
ಮನುಷ್ಯ ತನ್ನನ್ನು ತಾನು ಪ್ರಾಣಿಗಳಿಗಿಂತ ಅದೆಷ್ಟೇ ಗ್ರೇಟ್ ಎಂದು ಹೇಳಿಕೊಂಡು ಅಹಂಕಾರಪಟ್ಟುಕೊಂಡರೂ ಪ್ರಾಕೃತಿಕ ವಿಕೋಪಗಳಂತಹ ದುರಂತಗಳ ಸುಳಿವು ಮಾತ್ರ ಮೊದಲು ಸಿಗುವುದು ಪ್ರಾಣಿಗಳಿಗೆ ಎನ್ನುವ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕು. ಪ್ರಾಣಿಗಳಲ್ಲಿರುವ ಸೂಕ್ಷ್ಮವಾದ ಇಂದ್ರಿಯಗಳಿಗೆ ಭೂಮಿಯೊಳಗಿನ ತರಂಗಗಳನ್ನು, ಸೂಕ್ಷ್ಮ ಕಂಪನಗಳನ್ನು ಗ್ರಹಿಸುವ ವಿಶೇಷ ಶಕ್ತಿ ಇದೆ.
ನಾಯಿ, ಬೆಕ್ಕು, ಹಾವುಗಳು, ಹಸು, ಪಕ್ಷಿ ಮೊದಲಾದವುಗಳು ಭೂಮಿಯ ಅಡಿಯಲ್ಲಿ ನಡೆಯುವ ತರಂಗಗಳ ಬದಲಾವಣೆಯನ್ನು ಬೇಗನೆ ಗ್ರಹಿಸುತ್ತವೆ. ಪ್ರಾಕೃತಿಕ ವಿಪತ್ತು ಸಂಭವಿಸುವ ಸಂದರ್ಭದಲ್ಲಿ ನಾಯಿ, ಬೆಕ್ಕುಗಳು ಮನುಷ್ಯರ ಹತ್ತಿರದಲ್ಲೇ ಇರುವುದು, ಹಾವು, ಇಲಿ ಮೊದಲಾದ ಪ್ರಾಣಿಗಳು ಸುರಕ್ಷಿತ ತಾಣಕ್ಕೆ ಓಡಿ ಹೋಗುವುದು, ಗೋವುಗಳು ಕೊಟ್ಟಿಗೆಯಲ್ಲೇ ಗಲಿಬಿಲಿಯಿಂದ ಅರಚಾಡುವುದು ಮಾಡುವುದನ್ನು ನಾವು ಗಮನಿಸಬಹುದು.
ತಜ್ಞರು ಹೇಳುವಂತೆ ಪ್ರಾಣಿಗಳಿಗಿರುವ ಸೂಕ್ಷ್ಮ ಇಂದ್ರಿಯಗಳ ಕಾರಣಕ್ಕೆ ಪ್ರಕೃತಿಯಲ್ಲಿ ಸಂಭವಿಸುವ ಬದಲಾವಣೆಗಳ ಮುನ್ಸೂಚನೆಯ ವಾಸನೆಯನ್ನು ಅವುಗಳು ಬೇಗನೆ ಗ್ರಹಿಸುತ್ತವೆ. ಅಪಾಯದ ಸುಳಿವು ಸಿಗುವ ಕಾರಣದಿಂದಲೇ ನಾಯಿ, ಹಸು, ಪಕ್ಷಿಗಳು ಸೇರಿದಂತೆ ಎಲ್ಲಾ ರೀತಿಯ ಪ್ರಾಣಿಗಳು ಜೋರಾಗಿ ಅರಚುವುದು, ಓಡಿ ಹೋಗಲು ಪ್ರಯತ್ನ ಮಾಡುವುದನ್ನು ನಾವು ಗಮನಿಸಬಹುದು.
ಒಟ್ಟಿನಲ್ಲಿ ಎಲ್ಲಾ ಗೊತ್ತು ಎನ್ನುವ ಮನುಷ್ಯನಿಗೆ ಪ್ರಾಕೃತಿಕ ವಿಕೋಪಗಳನ್ನು ಗ್ರಹಿಸುವ ವಿಶೇಷವಾದ ಶಕ್ತಿ ಇಲ್ಲ ಎನ್ನುವುದು ಸತ್ಯ. ಜೊತೆಗೆ ವೈಜ್ಞಾನಿಕವಾಗಿ ಮನುಷ್ಯ ಎಷ್ಟೇ ಮುಂದುವರೆದಿದ್ದರೂ ಪ್ರಾಣಿಗಳಿಗೆ ಇರುವ ಆ ವಿಶೇಷ ಶಕ್ತಿಯನ್ನು ಕಲಿಯಲು ಸಾಧ್ಯವಾಗಿಲ್ಲ.
ಅದಕ್ಕೇ ಹೇಳುವುದು ಪ್ರಕೃತಿ ನಾಶ ಮಾಡುವ ಮನುಷ್ಯನಿಗೆ ನಿಸರ್ಗವೇ ಪಾಠ ಕಲಿಸುತ್ತದೆ. ಅದನ್ನು ಮೊದಲೇ ಗ್ರಹಿಸುವ ಶಕ್ತಿ ಇದ್ದಿದ್ದರೆ ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಆತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಓಡಿಹೋಗುತ್ತಿದ್ದ ಅಲ್ಲವೇ.

