ಬೆಂಗಳೂರು: ಸರ್ಕಾರ ಕೊಟ್ಟ ನಿವೇಶನಗಳಲ್ಲಿ ಮನೆ ನಿರ್ಮಿಸದೇ ಇದ್ದಲ್ಲಿ ಅಂತಹ ಸೈಟ್ಗಳನ್ನು ವಾಪಸ್ಸು ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಬಿಬಿಎಂಪಿ, ಬಿಡಿಎ ಸೈಟ್ ಯಾವುದೇ ಇರಲಿ ಅದನ್ನು ಪಡೆದ ಫಲಾನುಭವಿಗಳು ಅದರಲ್ಲಿ ಗೃಹ ನಿರ್ಮಾಣ ಮಾಡದೇ ಇದ್ದಲ್ಲಿ ಅಂತಹ ಸೈಟ್ ಗಳನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮನೆ ಕಟ್ಟಲಿ ಎನ್ನುವ ಉದ್ದೇಶದಿಂದ ಸರ್ಕಾರ ಸೈಟ್ ನೀಡಿರುವುದಾಗಿದೆ. ಸೈಟ್ ಪಡೆದುಕೊಂಡು ಅದನ್ನು ಖಾಲಿ ಬಿಟ್ಟರೆ ಅದನ್ನು ಮರಳಿ ಪಡೆಯುವುದು ಸರ್ಕಾರದ ಕೆಲಸ. ಸೈಟ್ ಕೊಟ್ಟಿರಿವುದು ಕಸ ಸುರಿಯುವುದಕ್ಕಲ್ಲ. ಹಾಗೆಯೇ ಹಂಚಿಕೆ ಆಗಿರುವ ಸೈಟ್ ಗೆ ಈಗಿನ ಬೆಲೆಯನ್ನು ವಾಪಸ್ಸು ನೀಡಲಾಗುವುದು. ಕೆಲವರು ಸೈಟ್ ಪಡೆದು ಇಪ್ಪತ್ತು ಮೂವತ್ತು ವರ್ಷಗಳಾದರೂ ಅದರಲ್ಲಿ ಮನೆ ಕಟ್ಟಿಲ್ಲ ಎಂದು ತಿಳಿಸಿದ್ದಾರೆ.

