ಮಂಗಳೂರು: ಬಾಲಿವುಡ್ನ ಬಹುನಿರೀಕ್ಷಿತ ಚಿತ್ರ ರಾಮಾಯಣದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಇದರಲ್ಲಿ ಸ್ಯಾಂಡಲ್ವುಡ್ ನಟ ಯಶ್ ಅವರು ರಾವಣನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿಪಲ್ಲವಿ, ರಾಮನ ಪಾತ್ರದಲ್ಲಿ ರಣಬೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ನಟ ಯಶ್ ಅವರ ರಾವಣ ಪಾತ್ರ ಟ್ರೈಲರ್ನಲ್ಲಿಯೇ ಧೂಳೆಬ್ಬಿಸಿದೆ. ಅವರ ನಟನೆಗೆ ವೀಕ್ಷಕರು ಬಹುಪರಾಕ್ ಎಂದಿದ್ದಾರೆ.
ಆದರೆ ಈ ಚಿತ್ರದಲ್ಲಿ ಕಾಸ್ಟಿಂಗ್ ಸರಿಯಾಗಿಲ್ಲ ಎನ್ನುವ ಅಭಿಪ್ರಾಯ ಹಲವರದ್ದು. ರಾಮನ ಪಾತ್ರಕ್ಕೆ ರಣಬೀರ್ ಬದಲು ಮಹೇಶ್ ಬಾಬು, ವಿಕಿ ಕೌಶಲ್ ಹೆಚ್ಚು ಹೊಂದಿಕೆಯಾಗುತ್ತಿದ್ದರು. ಅದರಂತೆ ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಅವರ ಬದಲಾಗಿ ರುಕ್ಮಿಣಿ ವಸಂತ್ ಅಥವಾ ದೀಪಿಕಾ ಪಡುಕೋಣೆ ಅವರನ್ನು ಆಯ್ಕೆ ಮಾಡಬೇಕಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ಕನ್ನಡದ ಸ್ಟಾರ್ ನಟ ಯಶ್ ಅವರು ಬಾಲಿವುಡ್ನ ರಾಮಾಯಣದಲ್ಲಿ ರಾವಣನಾಗಿ ಪಾತ್ರ ಮಾಡಿದ್ದು, ಆ ಪಾತ್ರಕ್ಕೆ ಜನರು ಜೈ ಎಂದಿದ್ದಾರೆ. ಅವರ ಅಭಿನಯಕ್ಕೆ ಜನರು ಫಿದಾ ಆಗಿದ್ದು, ಯಶ್ ಬಾಲಿವುಡ್ನಲ್ಲೂ ಧೂಳೆಬ್ಬಿಸಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

