ಕನ್ನಡದ ಚಿತ್ರದಲ್ಲಿ ನಡೆಸಿ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೆಸರು ಮಾಡಿರುವ ರಶ್ಮಿಕಾ ಮಂದಣ್ಣ ಅವರಿಗೆ ಗಂಭೀರ ಪ್ರಮಾಣ ಗಾಯವಾಗಿದೆ.
ರಣಬಾಲಿ ಚಿತ್ರದ ಶೂಟಿಂಗ್ ವೇಳೆ ಸಂಭವಿಸಿದ ಅವಘಡದಲ್ಲಿ ರಶ್ಮಿಕಾ ಅವರ ಸೊಂಟದ ಭಾಗಕ್ಕೆ ಗಾಯವಾಗಿದ್ದು, ವೈದ್ಯರು ಆರು ವಾರಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾಗೆ ಗಾಯವಾದ ಪರಿಣಾಮ ಶೂಟಿಂಗ್ನಲ್ಲಿ ಬದಲಾವಣೆ ಸಾಧ್ಯತೆ ಇದೆ.
ರಣಬಾಲಿ ಮತ್ತು ಮೈಸಾ ಚಿತ್ರದ ಶೂಟಿಂಗ್ ಏಕಕಾಲದಲ್ಲಿ ನಡೆಯುತ್ತಿದ್ದು ಎರಡರಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಸದ್ಯ ತಮಗೆ ಆಗಿರುವ ಗಂಭೀರ ಗಾಯದ ಕಾರಣದಿಂದ ಶೂಟಿಂಗ್ಗೆ ಬ್ರೇಕ್ ತೆಗೆದುಕೊಂಡಿದ್ದಾರೆ.

