ನವದೆಹಲಿ: ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟ 2026 ರ ಪುರುಷರ 65 ಕೆ.ಜಿ. ವೈಟ್ಲಿಫ್ಟಿಂಗ್ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಲಭಿಸಿದೆ.
ಭಾರತೀಯ ಕ್ರೀಡಾಪಟು ರಾಜಾ ಮುತ್ತುಪಾಂಡಿ ಅವರು ಸ್ನಾಚ್ನಲ್ಲಿ 126 ಕೆ.ಜಿ ಮತ್ತು ಕ್ಲೀನ್ ಆ್ಖಂಡ್ ಜರ್ಕ್ನಲ್ಲಿ 160 ಕೆ.ಜಿ. ಭಾರ ಎತ್ತುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಆ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಒಟ್ಟು 286 ಕೆ.ಜಿ. ಭಾರ ಎತ್ತುವ ಮೂಲಕ ಬೆಳ್ಳಿಯ ಪದಕ ಪಡೆದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ.
ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದೆ.

