ಉಡುಪಿ: ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಪುತ್ರನಿಗೆ ಅಂತರಾಷ್ಟ್ರೀಯ ಮಟ್ಟದ ಮಹತ್ವದ ಜವಾಬ್ದಾರಿಯೊಂದು ದೊರೆತಿದ್ದು ಉಡುಪಿ ಸೇರಿದಂತೆ ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.
ರಘುಪತಿ ಭಟ್ ಅವರ ಪುತ್ರ ರೋಹನ್ ಆರ್. ಬಾರಿತ್ತಾಯ ಅವರು ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳ ತಂಡಕ್ಕೆ ಅಧಿಕೃತ ಫಿಸಿಯೋ ಮತ್ತು ರಿಕವರಿ ಥೆರಪಿಸ್ಟ್ ಆಗಿ ನೇಮಕಗೊಂಡಿದ್ದಾರೆ.
ರೋಹನ್ ಅವರು ಯುಕೆಯ ಲಾಫ್ಬೊರೋ ವಿಶ್ವವಿದ್ಯಾಲಯದ ಸ್ಟೆಂತ್ ಆ್ಯಂಡ್ ಕಂಡೀಶನಿಂಗ್ನಲ್ಲಿ ಎಂಎಸ್ಸಿ ಮುಗಿಸಿರುವ ರೋಹನ್, ಉಡುಪಿ ಮತ್ತು ಇತರ ಭಾಗಗಳಲ್ಲಿ ಫಿಸಿಯೋ ಮತ್ತು ರಿಕವರಿ ಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಅವರಿಗೆ ಭಾರತೀಯ ತಂಡದಲ್ಲಿ ಜವಾಬ್ದಾರಿ ನೀಡಲಾಗಿದೆ.
ರೋಹನ್ ಅವರಿಗೆ ಈ ಜವಾಬ್ದಾರಿ ದೊರೆತಿರುವುದು ಕರ್ನಾಟಕದ ಕ್ರೀಡಾ ವಿಜ್ಞಾನ ವಿಭಾಗಕ್ಕೆ ಸಂದ ದೊಡ್ಡ ಗೌರವವಾಗಿದೆ.

