ಕೋಟ: ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಮಾವಿನಕಟ್ಟೆಯ ನಿವಾಸಿ ಭಾರತಿ ಎಂಬುವವರ ಮನೆಯ ಗೋದ್ರೇಜ್ನಲ್ಲಿದ್ದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ 320 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಜೂನ್ 01 ರಂದು ಮದುವೆ ಕಾರ್ಯಕ್ರಮಕ್ಕೆ ತೆರಳಿ ಬಂದಿದ್ದ ಭಾರತಿಯವರು ತಮ್ಮ ಬಳೆಯಲ್ಲಿದ್ದ 7 ಚಿನ್ನದ ಬಳೆಗಳು, 7 ಉಂಗುರಗಳು, 7 ಜೊತೆ ಕಿವಿ ಓಲೆ, 1 ಜೊತೆ ಜುಮುಕಿ, 3 ಬ್ರೇಸ್ಲೇಟ್, ಕರಿಮಣಿ ಸರ, ನೆಕ್ಲೇಸ್, ಮುತ್ತಿನ ಸರ, ಕೆಂಪು ಹರಳಿನ ಸರ ಹಾಗೂ 2 ಚಿನ್ನದ ಚೈನ್ಗಳನ್ನು ಗೋದ್ರೇಜ್ನಲ್ಲಿ ಇಟ್ಟಿದ್ದರು. ಜುಲೈ 27 ರಂದು ಬೆಳಿಗ್ಗೆ ಗೋದ್ರೇಜ್ ತೆಗೆದು ನೋಡಿದಾಗ ಆಭರಣಗಳು ನಾಪತ್ತೆಯಾಗಿದ್ದು, ಹುಡುಕಾಡಿದರೂ ಪತ್ತೆಯಾಗಿಲ್ಲ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 125/2026, ಬಿಎನ್ಎಸ್ಎಸ್ ಕಲಂ 331(3), 331(4), 305 ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

