ಕರಾವಳಿ ಭಾಗದ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಉನ್ನತ ದರ್ಜೆಯ ಹಾಗೂ ಬಾಳಿಕೆ ಬರುವ ಪೀಠೋಪಕರಣಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆಯಲ್ಲಿ ‘ಮೀನಾಕ್ಷಿ ಫರ್ನಿಚರ್ಸ್’ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬೃಹತ್ ಶೋರೂಂನಲ್ಲಿ ಪ್ರೀಮಿಯಂ ಸಾಗವಾನಿ ಹಾಗೂ ಅಕೇಶಿಯ ಮರದಿಂದ ತಯಾರಿಸಿದ ಅತ್ಯಾಕರ್ಷಕ ಸೋಫಾ ಸೆಟ್ಗಳು, ಡೈನಿಂಗ್ ಟೇಬಲ್ಗಳು, ವಾರ್ಡ್ರೋಬ್ಗಳು ಮತ್ತು ಮಲಗುವ ಕೋಣೆಯ ಆಧುನಿಕ ಬೆಡ್ಗಳ ವಿಶಾಲ ಸಂಗ್ರಹ ಲಭ್ಯವಿದೆ.

ಗ್ರಾಹಕರ ಅನುಕೂಲಕ್ಕಾಗಿ ಸಂಸ್ಥೆಯು ಹಲವು ವಿಶೇಷ ಸೇವೆಗಳನ್ನು ಹಾಗೂ ಕೊಡುಗೆಗಳನ್ನು ನೀಡುತ್ತಿದ್ದು, ಮನೆ ಹಾಗೂ ಕಚೇರಿ ಬಳಕೆಯ ಆಫೀಸು ಕುರ್ಚಿಗಳ ಮಾರಾಟದ ಜೊತೆಗೆ ಹಳೆಯ ಕಚೇರಿ ಕುರ್ಚಿಗಳ ರಿಪೇರಿ ಸೇವೆಯನ್ನು ಒದಗಿಸುತ್ತಿದೆ. ಇದರೊಂದಿಗೆ, ಗ್ರಾಹಕರು ತಮ್ಮ ಮನೆಯಲ್ಲಿರುವ ಹಳೆಯ ಪೀಠೋಪಕರಣಗಳನ್ನು ನೀಡಿ ಹೊಸ ಮಾಡರ್ನ್ ಫರ್ನಿಚರ್ ಪಡೆದುಕೊಳ್ಳುವ ಎಕ್ಸ್ಚೇಂಜ್ ಅವಕಾಶವನ್ನೂ ಕಲ್ಪಿಸಲಾಗಿದೆ. ಕೈಗೆಟುಕುವ ದರದಲ್ಲಿ ಉತ್ಪನ್ನಗಳನ್ನು ಖರೀದಿಸಲು ಸುಲಭ ಕಂತುಗಳ ಸೌಲಭ್ಯವಿದ್ದು, ಖರೀದಿಸಿದ ಪೀಠೋಪಕರಣಗಳನ್ನು ಅತ್ಯಂತ ಸುರಕ್ಷಿತವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಉಚಿತ ಡೋರ್ ಡೆಲಿವರಿ ಸೇವೆಯೂ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ಖರೀದಿಗಾಗಿ ಗ್ರಾಹಕರು ಮೀನಾಕ್ಷಿ ಫರ್ನಿಚರ್ಸ್, ಎನ್.ಹೆಚ್. 66, ತೆಕ್ಕಟ್ಟೆ ವಿಳಾಸಕ್ಕೆ ಭೇಟಿ ನೀಡಬಹುದು ಅಥವಾ 9731352979, 6362690157 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

