ದೇಹದಲ್ಲಿ ಯಾವುದೇ ತರದ ನೋವು ಇರಲಿ ‘ಪೈನ್ ಕಿಲ್ಲರ್’ ತೆಗೆದುಕೊಂಡು ಪರಿಹಾರ ಕಂಡುಕೊಳ್ಳುವ ಅಭ್ಯಾಸ ನಮ್ಮಲ್ಲಿ ಹಲವರಿಗೆ ಇದೆ. ಪೈನ್ ಕಿಲ್ಲರ್ ಅಥವಾ ನೋವು ನಿವಾರಕ ಔಷಧಗಳ ಸೇವನೆ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ತಿಳಿದಲ್ಲಿ ನೀವು ಗಾಬರಿಯಾಗುತ್ತೀರಿ. ಒಂದು ನೋವು ನಿವಾರಣೆಗೆ ಸೇವನೆ ಮಾಡಿದ ಪೈನ್ ಕಿಲ್ಲರ್ ನಮ್ಮ ಮೂತ್ರಪಿಂಡಕ್ಕೆ ಹಾನಿ ಮಾಡಿ ಮತ್ತಷ್ಟು ದೊಡ್ಡ ಪ್ರಮಾಣದ ನೋವು ನೀಡುತ್ತದೆ.
ದೇಹದೊಳಗಿನ ತ್ಯಾಜ್ಯ ವಸ್ತುಗಳನ್ನು ಹೊರಕ್ಕೆ ಹಾಕಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮೂತ್ರಪಿಂಡ ಅತ್ಯಗತ್ಯ. ರಕ್ತದೊತ್ತಡ ನಿಯಂತ್ರಣ, ದ್ರವ – ಲವಣಗಳ ಸಮತೋಲನ ಕಾಪಾಡುವ ಕೆಲಸವನ್ನು ಮೂತ್ರಪಿಂಡ ಮಾಡುತ್ತದೆ. ಹೀಗೆ ನಮ್ಮ ದೇಹಕ್ಕೆ ಅತ್ಯಗತ್ಯವಾದ ಮೂತ್ರಪಿಂಡಕ್ಕೆ ಹಾನಿ ಮಾಡುವ ಕೆಲಸವನ್ನು ಪದೇ ಪದೇ ಸೇವನೆ ಮಾಡುವ ಪೈನ್ ಕಿಲ್ಲರ್ಗಳು ಮಾಡುತ್ತವೆ ಎನ್ನುವುದು ಸತ್ಯ.
ವೈದ್ಯರ ಸೂಚನೆಯಂತೆ ಪೈನ್ ಕಿಲ್ಲರ್ಗಳನ್ನು ಬಳಕೆ ಮಾಡಿದರೆ ಅವು ಪರಿಣಾಮಕಾರಿ ಮದ್ದು. ಆದರೆ ಅದೇ ಮದ್ದನ್ನು ಅತಿಯಾಗಿ ಸೇವನೆ ಮಾಡುವುದು, ವೈದ್ಯರ ಸಲಹೆ ಪಡೆಯದೆಯೇ ಸೇವನೆ ಮಾಡುವುದು ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.
ಹಾಗಾಗಿ ನೋವು ನಿವಾರಕ ಔಷಧಗಳನ್ನು ಪದೇ ಪದೇ ಬಳಕೆ ಮಾಡುವ ಅಭ್ಯಾಸ ಇರುವವರು ಇನ್ನಾದರೂ ಆ ಅಭ್ಯಾಸಕ್ಕೆ ಬ್ರೇಕ್ ಹಾಕಿದಲ್ಲಿ ಉತ್ತಮ. ಆ ಕ್ಷಣಕ್ಕೆ ನೋವು ಪರಿಹಾರವಾಗಬೇಕು ಎಂದು ತೆಗೆದುಕೊಂಡ ಪೈನ್ ಕಿಲ್ಲರ್ ಜೀವನ ಪರ್ಯಂತದ ನೋವಿಗೆ ಕಾರಣವಾಗಬಹುದು. ಎಚ್ಚರ.

