ಮಂಗಳೂರು: ಬಂಟ್ವಾಳದ ಅಮ್ಮುಂಜೆಯಲ್ಲಿ ವಾಸವಿದ್ದ ವೃದ್ಧೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ, ಚಿನ್ನಾಭರಣಗಳನ್ನು ದೋಚಿದ ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕವೃದ್ಧೆ ಬೆನಡಿಕ್ಟ್ ಕಾರ್ಲೋ(73) ಅವರ ಆರೋಗ್ಯ ಸಹಾಯಕಿಯಾಗಿದ್ದ ಏಲ್ಮಾ ಪ್ರೆಶ್ಚಿತ್ ಬರೆಟ್ರೋ, ಆಕೆಯ ಸ್ನೇಹಿತ ಸತೀಶ್ ನಾಯಕ್ ಮತ್ತು ಚರಣ್ ಕುಮಾರ್ ಜೊತೆ ಸೇರಿ ಹತ್ಯೆ ನಡೆಸಿ, ಮಗ ನಗದು ದೋಚಿದ್ದರು.
ಮೊದಲು ಏಲ್ಮಾ ಸತೀಶ್ ನಾಯಕ್ ಜೊತೆಗೆ ಸೇರಿ ಬೆನಡಿಕ್ಟ್ ಅವರಿಗೆ ವಿಷಾಹಾರ ನೀಡಿ ಕೊಲ್ಲಲು ಯತ್ನ ಮಾಡಿದ್ದರು. ಆ ಪ್ರಯತ್ನ ಸಫಲವಾಗದ ಹಿನ್ನೆಲೆ ಚರಣ್ ಸಹಾಯದಿಂದ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲ್ಲಲಾಗಿತ್ತು. 2021 ರ ಜನವರಿಯಲ್ಲಿ ಈ ಘಟನೆ ನಡೆದಿತ್ತು.
ವೃದ್ಧೆಯನ್ನು ಕೊಂದ ಬಳಿಕ ಆರೋಪಿಗಳು ಆಕೆಯ ಚಿನ್ನಾಭರಣವನ್ನು ಕದ್ದು, ಸಾಕ್ಷ್ಯನಾಶ ಮಾಡಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

