ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಹೇಳಿಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಕಿಡಿಗೇಡಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಶಿವಕಾರದ ಹಜರತ್ ಅಲಿ (25) ಎಂದು ಗುರುತಿಸಲಾಗಿದೆ. ಆರೋಪಿಯು ನಗರದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ವಿಧಾನಸೌಧ ಮಂಭಾಗ ಬಂದು ರೀಲ್ ಮಾಡುವ ಹುಚ್ಚಿಗೆ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಹೇಳಿಕೊಂಡು ವಿಡಿಯೋ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಜೆಬಿಎಸ್-ಕಿಂಗ್-ಎಚ್ಜಿ ಎಂಬ ಹೆಸರಿನ ಖಾತೆ ಹೊಂದಿದ್ದ ಆರೋಪಿ, ವಿಧಾನಸೌಧ ಮುಂಭಾಗ ಬಂದು ವಿಧಾನಸೌಧವನ್ನು ಶೂಟ್ ಮಾಡಿ ಬಾಂಬ್ ಸ್ಫೋಟಿಸುವ ರೀತಿಯಲ್ಲಿ ಎಡಿಟ್ ಮಾಡಿದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ. ಅಲ್ಲದೆ, ವಿಧಾನಸೌಧಕ್ಕೆ ‘ಉಡಾ ದಿಯಾ ಬಾಂಬ್ ನೆ’ ಎಂಬ ಶೀರ್ಷಿಕೆಯನ್ನೂ ನೀಡಿದ್ದಾನೆ ಎನ್ನಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.ಸೂಚನೆ: ಮೂಲ ಚಿತ್ರದಲ್ಲಿನ ಕೆಲವು ಪದಗಳು ಸ್ಪಷ್ಟವಾಗಿ ಕಾಣಿಸದ ಕಾರಣ, ವ್ಯಕ್ತಿಯ ಹೆಸರಿನಂತಹ ವಿವರಗಳನ್ನು ಪ್ರಕಟಿಸುವ ಮೊದಲು ಮೂಲ ಸುದ್ದಿಯೊಂದಿಗೆ ಪರಿಶೀಲಿಸುವುದು ಸೂಕ್ತ.

