ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ವರಮಹಾಲಕ್ಷ್ಮಿ ಪೂಜೆಯ ದಿನ ಈಗ ಮತ್ತೊಂದು ಪ್ರಮುಖ ಅಪ್ಡೇಟ್ ನೀಡಿದೆ. ಚಿತ್ರತಂಡ ಈ ಚಿತ್ರದ ನಾಯಕಿ ಪಾತ್ರವನ್ನು ಬಹಿರಂಗಪಡಿಸಿದ್ದು, ಅದರಲ್ಲಿ ಸಪ್ತಸಾಗರದಾಚೆ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಅಭಿನಯಿಸುತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ “ಕನಕವತಿ” ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೋಸ್ಟರ್ನಲ್ಲಿ ಅವರು ರಾಜವಂಶದ ಯುವರಾಣಿಯಂತೆ ಕಾಣುತ್ತಿದ್ದಾರೆ. ಹಿಂದಿನ ಹಿನ್ನೆಲೆ ಕೂಡ ಅರಮನೆ ಶೈಲಿಯಲ್ಲಿದ್ದು, ಇದು ಕದಂಬರ ಕಾಲದ ಕಥೆ ಎಂಬ ಅಭಿಪ್ರಾಯಕ್ಕೆ ಬಲ ನೀಡಿದೆ.
ರುಕ್ಮಿಣಿ ವಸಂತ್ ಅವರ ಪೋಸ್ಟರ್ ಲುಕ್ ರಿಲೀಸ್ ಆಗಿದ್ದು ಸಿನಿಮಾ ಪ್ರಿಯರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದೆ. ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯ, ವಿಜಯ್ ಕಿರಗಂದೂರು ನಿರ್ಮಾಪಕ, ಇವೆಲ್ಲದರೊಂದಿಗೆ ಚಿತ್ರ ಭಾರಿ ಮಟ್ಟದ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಅಕ್ಟೋಬರ್ 2ರಂದು ಈ ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ, ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.


