ಕುಂದಾಪುರ: ಇಲ್ಲಿನ ತ್ರಾಸಿ ಮಿಲೇನಿಯಮ್ ಚರ್ಚ್ ಹಾಲ್ನಲ್ಲಿ ಆ.9 ಮತ್ತು 10ರಂದು ಹಲಸು ಮತ್ತು ಹಣ್ಣು ಮೇಳ ನಡೆಯಲಿದೆ ಎಂದು ಮಹಮ್ಮದ್ ಹುಸೇನ್ ತಿಳಿಸಿದ್ದಾರೆ.
ತ್ರಾಸಿಯಲ್ಲಿ ಪ್ರಥಮ ಬಾರಿಗೆ ಎರಡು ದಿನಗಳ ಕಾಲ ಹಲಸು ಮೇಳ ನಡೆಯಲಿದೆ. ವಿಶೇಷವಾಗಿ ಆಂಧ್ರ ಪ್ರದೇಶದ ಹಲಸು ಹಾಗೂ ಮಾವು ಈ ಮೇಳಕ್ಕೆ ಬರಲಿದೆ. ಹಲಸಿನಲ್ಲಿ ಪ್ರಸಿದ್ಧವಾದ ಕೆಂಪು ಹಲಸು, ಕೇಸರಿ, ಹಾಗೂ ಹಳದಿ ಹಲಸುಗಳು ಇಲ್ಲಿ ಲಭ್ಯ ಇದೆ. ರಾಜ್ಯ-ಹೊರರಾಜ್ಯದ ವಿವಿಧೆಡೆಯ ಸಾವಯವ ಮಾದರಿಯಲ್ಲಿ ಬೆಳೆದ ಮಾವು ಮತ್ತು ಹಲಸಿನ ಉತ್ಪನ್ನಗಳು, ಹಣ್ಣಿನ ಖಾದ್ಯಗಳು ಗ್ರಾಹಕರಿಗೆ ಲಭ್ಯವಿದೆ.
ಹೂವಿನ ಗಿಡಗಳು, ಹಣ್ಣಿನ ಗಿಡಗಳ ನರ್ಸರಿಗಳು ಭಾಗವಹಿಸಲಿವೆ. ಬಹು ಆಯ್ಕೆಯ ಗಿಡಗಳು ಲಭ್ಯವಾಗಲಿದೆ. ತರಕಾರಿ, ಹೂವಿನ ಬೀಜಗಳು, ಕೃಷಿ ಉಪಕರಣಗಳು ಸಹಿತ ನೂರಕ್ಕೂ ಅಧಿಕ ಮಳಿಗೆಗಳು ಇರಲಿವೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.


