ಕೋಟ: ಹಲಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಇಂದು ವರಾಹಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ರಂಗೋಲಿಯೊಂದು ಮೂಡುಬಂದಿತ್ತು. ಕೋಟ ಹಂದಟ್ಟು ನಿವಾಸಿ ಕುಮಾರಿ ಪ್ರಜ್ಞಾ ಹಂದಟ್ಟು ತಾಯಿ ಅಮೃತೇಶ್ವರಿಯ ಸಾನ್ನಿಧ್ಯದಲ್ಲಿ ತಾಯಿಯ ಸುಂದರ ರಂಗೋಲಿಯೊಂದನ್ನು ಬಿಡಿಸಿದ್ದಾರೆ.

ಕುಮಾರಿ ಪ್ರಜ್ಞಾ ಹಂದಟ್ಟು ಉಡುಪಿಯ ಪಿಪಿಸಿ ಕಾಲೇಜಿನ ಎಂ.ಎಸ್ಸಿ ಪದವೀಧರೆಯಾಗಿದ್ದು ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಹೊಂದಿದವರು. ಗುರುವಿಲ್ಲದೆ ತನ್ನ ಸ್ವಂತ ಪರಿಶ್ರಮದಿಂದ , ಆಸಕ್ತಿಯಿಂದ ಸಾಧನೆ ಮಾಡಿರುವುದು ವಿಶೇಷ. ಪ್ರಜ್ಞಾ ಹಂದಟ್ಟು ಈ ಹಿಂದೆ ಚಲನಚಿತ್ರ ನಟ ದೊಡ್ಡಣ್ಣ, ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರ ಚಿತ್ರ ಬಿಡಿಸಿ ಅವರಿಂದ ಶಹಬ್ಬಾಸ್ ಅನಿಸಿಕೊಂಡವರು. ಈಕೆಯ ಈ ಎಲ್ಲಾ ಸಾಧನೆಗೆ ಬೆನ್ನೆಲುಬಾಗಿರುವವರು ಇವರ ತಾಯಿ, ಪೂರ್ಣಪ್ರಜ್ಞ ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ಗೀತಾ ಪೂಜಾರಿ.

ವರಮಹಾಲಕ್ಮಿ ಹಬ್ಬದ ಶುಭದಿನದಂದು ಕುಮಾರಿ ಪ್ರಜ್ಞಾ ಹಂದಟ್ಟು ಬಿಡಿಸಿದ ಅಮೃತೇಶ್ವರಿ ತಾಯಿಯ ರಂಗೋಲಿ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಆನಂದ್ ಕುಂದರ್ , ಇನ್ನಿತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



