ಭಾರತದ ಕ್ರೀಡಾ ಕ್ಷೇತ್ರದ ಅತಿದೊಡ್ಡ ಅತಿದೊಡ್ಡ ವ್ಯವಹಾರವೊಂದರಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟ ಖರೀದಿಸಿದೆ.
ಭಾರತದ ಕ್ರೀಡಾ ಇತಿಹಾಸದ ಅತಿದೊಡ್ಡ ಡೀಲ್ ಆಗಿರುವ ಈ ಖರೀದಿ ವ್ಯವಹಾರದಲ್ಲಿ 446 ಕೋಟಿಗೆ ವಿಜಯ ಮಲ್ಯ ಖರೀದಿಸಿದ್ದ ರಾಯಲ್ ಚಾಲೆಂಜರ್ಸ್ ತಂಡವನ್ನು 17 ಸಾವಿರ ಕೋಟಿಯ ಭಾರೀ ಮೊತ್ತಕ್ಕೆ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟ ಖರೀದಿಸಿದೆ.
ಐಪಿಎಲ್ ಆರಂಭಕ್ಕೂ ಮೊದಲೇ ಆರ್ಸಿಬಿ ತಂಡ ಮಾರಾಟವಾಗಿದ್ದು ಅತಿದೊಡ್ಡ ಲಾಭ ಗಳಿಸಿದೆ. ಬಿರ್ಲಾ ಟೈಮ್ಸ್, ಬ್ಲಾಕ್ ಸ್ಟೋನ್ ಕಂಪೆನಿಗಳ ಒಕ್ಕೂಟ ಈ ಖರೀದಿ ಫೈನಲ್ ಮಾಡಿದೆ.
ಆರ್ಸಿಬಿ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್ ತಂಡ ಕೂಡ ಮಾರಾಟವಾಗಿದ್ದು 15,700 ಕೋಟಿಗೆ ಡೀಲ್ ಕುದುರಿದೆ ಎನ್ನಲಾಗಿದೆ.

