ಮೇಷ
ಇಂದು ನಿಮಗೆ ವಿಶೇಷ ಭರವಸೆಯನ್ನು ನೀಡುತ್ತದೆ, ವಿಶೇಷವಾಗಿ ಕಾನೂನು ವಿಷಯಗಳಲ್ಲಿ ಪರಿಹಾರ ಮತ್ತು ಯಶಸ್ಸನ್ನು ಸೂಚಿಸುತ್ತದೆ. ವೃತ್ತಿಪರ ಕ್ಷೇತ್ರದಲ್ಲಿ, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳಿಗೆ, ಉನ್ನತ ಶಿಕ್ಷಣದ ಮಾರ್ಗಗಳು ತೆರೆದುಕೊಳ್ಳಬಹುದು. ಪ್ರಗತಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಆದರೆ ಇಂದು ಇತರರ ವ್ಯವಹಾರಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು. ನೀವು ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಸಂಪೂರ್ಣ ಎಚ್ಚರಿಕೆಯಿಂದ ಪರಿಗಣಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಿ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿಗೆ ಕೆಲವು ಕಾರಣಗಳಿರಬಹುದು. ನಿಮ್ಮ ದಿನವು ಸಾಕಷ್ಟು ಆಹ್ಲಾದಕರವಾಗಿರುತ್ತದೆ.ಮೇಷ ರಾಶಿಯ ಜನರಿಗೆ
ವೃಷಭ
ಇಂದು ಹುಟ್ಟುಗುಣ ಘಟ್ಟ ಹತ್ತಿದರೂ ಹೋಗದು ಎಂಬ ಮಾತನ್ನು ನೆನಪಿಸಿಕೊಳ್ಳಿ. ಹೊಸ ಪರಿಸರ ಅಥವಾ ಹೊಸ ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ತಿಳಿಯಿರಿ. ಬದಲಾವಣೆಗೆ ಅವಕಾಶ ಇರಲಿ. ಇದರಿಂದ ಮಹತ್ತರವಾದುದನ್ನು ಸಾಧಿಸಬಹುದು. ವ್ಯವಹಾರದಲ್ಲಿ ತೊಡಗಿರುವವರಿಗೆ ಇಂದು ಅನುಕೂಲಕರ ದಿನವಾಗಬಹುದು. ನಿಮ್ಮ ಕಠಿಣ ಪರಿಶ್ರಮ ಫಲ ನೀಡುತ್ತದೆ ಮತ್ತು ನಿಮ್ಮ ಹಿಂದಿನ ತಪ್ಪುಗಳಿಂದ ಕಲಿಯುವ ಮೂಲಕ ನೀವು ಮುಂದುವರಿಯಿರಿ.
ಮಿಥುನ
ಇಂದು ಕೆಲಸದ ಸ್ಥಳದಲ್ಲಿ ಬಾಸ್ ಅನವಶ್ಯಕ ಕಿರಿಕಿರಿ ಎಬ್ಬಿಸಿದರೂ ರೇಗಾಟ ಮಾಡಬೇಡಿ. ಮೈಕೊಡವಿ ಬಾಸ್ ಮೆಚ್ಚುವಂತೆ ಕೆಲಸ ಮಾಡಿ. ಅದರಿಂದ ಪ್ರಶಂಸೆ ಪಡೆಯುವಿರಿ. ಅನ್ಯರೊಡನೆ ವಾದ, ವಿವಾದದಿಂದ ದೂರವಿರಿ. ಕಷ್ಟ ಬಂತೆಂದು ದುಃಖಿಸದೆ ಅದನ್ನು ಎದುರಿಸುವ ಶಕ್ತಿ ನೀಡು ಎಂದು ಭಗವಂತನಲ್ಲಿ ಪ್ರಾರ್ಥಿಸಿ.ವ್ಯಾಜ್ಯಗಳು ಇದ್ದರೂ ಗೊಂದಲಕ್ಕೆ ಅವಕಾಶ ಬೇಡ. ಸೂಕ್ತವಾದ ಸ್ನೇಹಿತರ ಸಹಾಯದಿಂದ ಒತ್ತಡಗಳಿಗೆ ವಿರಾಮ ಹಾಕುವಿರಿ. ಮಕ್ಕಳ ಪ್ರಗತಿ ಮತ್ತು ಮೊಮ್ಮಕ್ಕಳ ತುಂಟತನ ನಿಮ್ಮ ಮುಖದಲ್ಲಿ ಮಂದಹಾಸ ಮೂಡಿಸುವುದು. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಸಂಗಾತಿ ದಿನದಿಂದ ದಿನಕ್ಕೆ ಪ್ರವೃದ್ಧಮಾನಕ್ಕೆ ಬರುತ್ತಿರುವುದು ನಿಮಗೆ ಹೆಚ್ಚಿನ ಸಂತೋಷ ನೀಡುವುದು. ಪಕ್ಷದ ಏಳಿಗೆಗಾಗಿ ದುಡಿದ ರಾಜಕಾರಣಿಗಳಿಗೆ ಉನ್ನತ ಸ್ಥಾನಮಾನ ಸಿಗುವುದು. ಆದಾಯದಲ್ಲಿ ಗಣನೀಯ ಏರಿಕೆ ಕಂಡುಬರುವುದು. ವ್ಯಾಪಾರ ವ್ಯವಹಾರಸ್ಥರಿಗೆ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುವುದು.
ಕಟಕ
ಕಟಕ ರಾಶಿಯ ಜನರಿಗೆ ಇಂದು ಗುರು, ಹಿರಿಯರಿಗೆ ನೀವು ಮಾಡುತ್ತಿರುವ ಸೇವೆಯಿಂದ ನೀವು ಯಶಸ್ಸಿನತ್ತ ಸಾಗುವಿರಿ. ಅವರ ಅನುಗ್ರಹ ಹಾಗೂ ಆಶೀರ್ವಾದ ನಿಮ್ಮ ಆತ್ಮಬಲವನ್ನು ಹೆಚ್ಚಿಸಲಿದೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುವ ಸಾಧ್ಯತೆ ಇದೆ. ಸರ್ಕಾರಿ ನೌಕರರಿಗೆ ಎಂದೂ ಇಲ್ಲದ ಪ್ರಶಂಸೆ ಸಿಗುವುದು. ಹಣಕಾಸಿನ ವ್ಯವಹಾರ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಸಾಲ ವಸೂಲಾತಿಗೆ ಅಡ್ಡಿಗಳು ಬರಲಿವೆ. ವಿವಾಹ ಯೋಗ್ಯ ವಧುವರರಿಗೆ ಕಂಕಣಭಾಗ್ಯ ಕೂಡಿ ಬರಲಿದೆ.
ಸಿಂಹ
ಇಂದು ನಿಮ್ಮನ್ನು ಬಹಳ ದಿನಗಳಿಂದ ಕಾಡುತ್ತಿದ್ದ ಚಿಂತೆಗಳು ಬಗೆಹರಿಯಲಿವೆ. ಹಲವು ವಿಷಯಗಳಲ್ಲಿ ಚಂಚಲತೆ ತೋರದೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಿ. ಚಾಡಿ ಮಾತುಗಳನ್ನು ಹೇಳುವ ಬಂಧುಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದಿರಿ. ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸಬೇಡಿ. ನಿಮ್ಮ ಆಪ್ತ ವಲಯದಲ್ಲಿರುವವರಿಗೆ ಅನಾರೋಗ್ಯ ಕಾಡಲಿದೆ. ಅವರಿಗೆ ನಿಮ್ಮ ಕೈಲಾದ ನೆರವು ನೀಡಿ. ಮುಂದಿನ ದಿನಗಳ ಪ್ರಮುಖ ಕಾರ್ಯ ಯೋಜನೆಗಳಿಗಾಗಿನ ಪೂರ್ವಭಾವಿ ಮಾತುಕತೆಗಳಿಗೆ ಸಕಾಲವಾಗಿದೆ. ನಿಮ್ಮ ಸ್ನೇಹಿತರು ಮತ್ತು ಸಮಾನ ಮನಸ್ಕರೊಡನೆ ಕುಳಿತು ಚರ್ಚಿಸಿ ಕಾರ್ಯಕ್ರಮಗಳ ರೂಪುರೇಷೆಗಳನ್ನು ನಿರ್ಧರಿಸಿ.
ಕನ್ಯಾ
ಇಂದು ಬರೀ ಗೊಂದಲದಿಂದಲೇ ಕೂಡಿದ್ದ ವೃತ್ತಿಯಲ್ಲಿ ಸ್ಥಿರತೆ ಮೂಡಲಿದೆ. ಅನಿರೀಕ್ಷಿತವಾಗಿ ಬರುವ ಬಂಡವಾಳ ನಿಮ್ಮ ಹೊಸ ಯೋಜನೆಗಳಿಗೆ ಮೂಲಾಧಾರವಾಗಲಿದೆ. ಕುಟುಂಬ ಸದಸ್ಯರಲ್ಲಿಮಗನ ಮದುವೆ ವಿಚಾರದಲ್ಲಿಒಮ್ಮತ ಮೂಡುವುದು. ದೂರ ಪ್ರಯಾಣವಿದೆ. ಬಂಧುಗಳ ವಿಶ್ವಾಸ ಮರಳಿ ಪಡೆಯುವಿರಿ. ಸಾಲಕ್ಕೆ ಕೈ ಚಾಚಬೇಡಿ. ವಿವಾದಗಳಿಂದ ದೂರವಿರುವುದು ಒಳ್ಳೆಯದು. ನೆರೆಹೊರೆಯವರಲ್ಲಿ ಹೆಚ್ಚಿನ ಮಾತುಕತೆಯಿರಲಿ. ಅದು ಸ್ನೇಹಪೂರ್ಣವಾಗಿರಲಿ ಮತ್ತು ಸೌಜನ್ಯ ಪೂರಕವಾಗಿರಲಿ. ಆದರೆ ಎಲ್ಲರನ್ನೂ ಪೂರ್ತಿಯಾಗಿ ನಂಬದಿರಿ. ಸಲಹೆಗಳು ನಿಮ್ಮದು ತೀರ್ಮಾನ ನನ್ನದು ಎಂಬ ಧೋರಣೆ ಇರಲಿ.
ತುಲಾ
ತುಲಾ ರಾಶಿಯ ಜನರಿಗೆ ಇಂದು ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬಿ ಹೋಗುವ ನಿಮ್ಮ ಮನಸ್ಥಿತಿಯನ್ನು ಪರಿವರ್ತಿಸಿಕೊಳ್ಳಬೇಕಾಗಿದೆ. ಹಣದ ಉಳಿತಾಯದ ಬಗ್ಗೆ ಗಮನಹರಿಸಿ. ನೀವು ಆರಂಭಿಸಿದ ವೃತ್ತಿ ನಿಮಗೆ ನೆಮ್ಮದಿ ತರಲಿದೆ. ಕುಟುಂಬದಲ್ಲಿರುವ ಅನಾರೋಗ್ಯ ಸಮಸ್ಯೆ ಸುಧಾರಿಸಲಿದೆ. ವಿದ್ಯಾರ್ಥಿಗಳು ಇಚ್ಛಿಸಿದ ವಿಭಾಗದಲ್ಲಿಓದಲು ಅವಕಾಶ ದೊರೆಯುವುದು. ಮಂಗಳ ಕಾರ್ಯದಲ್ಲಿ ಭಾಗವಹಿಸುವಿರಿ. ಅನುಪಯುಕ್ತ ವಸ್ತುಗಳ ಖರೀದಿಯಿಂದ ಹೆಚ್ಚಿನ ಹಣ ಖರ್ಚಾಗಲಿದೆ. ಮಕ್ಕಳಿಗೆ ಶೀತ ಬಾಧೆಗಳು ಕಾಡುವ ಸಾಧ್ಯತೆ ಇದೆ.
ವೃಶ್ಚಿಕ
ಇಂದು ಹಣಕಾಸಿನ ಸಮಸ್ಯೆ ಸರಿದಾರಿಗೆ ಬರಲಿದೆ. ಬಂಧುಗಳ ಆಗಮನ ಮನಸ್ಸಿಗೆ ಹರ್ಷವನ್ನುಂಟು ಮಾಡಲಿದೆ. ಅನ್ಯರೊಂದಿಗೆ ವ್ಯವಹರಿಸುವಾಗ ತುಸು ಎಚ್ಚರದಿಂದಿರಿ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಸಾಹಸಕ್ಕೆ ಕೈ ಹಾಕಬೇಡಿ. ಸ್ನೇಹಿತರ ಸಲಹೆಯನ್ನು ಸೂಕ್ತವೆನಿಸಿದರೆ ಸ್ವೀಕರಿಸುವುದು ತಪ್ಪಲ್ಲ. ಅನಿರೀಕ್ಷಿತವಾಗಿ ಕೆಲವು ಘಟನೆಗಳು ನಿಮ್ಮನ್ನು ಘಾಸಿಗೊಳಿಸುವವು. ಪ್ರತ್ಯೇಕ ಪ್ರಕರಣಗಳಲ್ಲಿ ಸಿಹಿ ಮತ್ತು ಕಹಿ ಸುದ್ದಿಗಳೆರಡರ ಮಿಶ್ರಣ ಲಭ್ಯವಾಗಲಿದೆ. ನೀವು ಹಮ್ಮಿಕೊಳ್ಳಬೇಕೆಂದಿರುವ ಬೃಹತ್ ಯೋಜನೆಗೆ ಸರಕಾರ ಅನುಮೋದನೆ ನೀಡುವ ಸಿಹಿ ಸುದ್ದಿ ಒಂದೆಡೆ ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಹಣದ ಕೊರತೆಯು ಕಹಿ ಎನಿಸುವುದು.
ಧನು
ಇಂದು ವೈವಾಹಿಕ ಜೀವನದಲ್ಲಿ ಸ್ವಲ್ಪ ಅಸಮಾಧಾನ ಮೂಡಬಹುದು. ಬಂಧುಗಳ ಜೊತೆ ಅನವಶ್ಯಕ ವಾಗ್ವಾದ ಬೇಡ. ಸೋದರ ಸೋದರಿಯರಿಗೆ ಕಂಕಣಬಲ ಬರುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ವಾಸಸ್ಥಾನದಲ್ಲಿ ಬದಲಾವಣೆ ಕಂಡುಬರುವುದು. ವಿದ್ಯಾರ್ಥಿಗಳಿಗೆ ಅನುಕೂಲ ವಾತಾವರಣ ಕೂಡಿ ಬರುವುದು. ಖಾಸಗಿ ಕಂಪನಿ ನೌಕರರು ಮಾಲೀಕರೊಂದಿಗೆ ಹೊಂದಿಕೊಳ್ಳುವುದು ಅನಿವಾರ್ಯ. ನಿಮ್ಮದೇ ಆದ ಮನೆ ರೂಪಿಸುವ ವಿಚಾರದಲ್ಲಿ ಮಹತ್ವದ ಬೆಳವಣಿಗೆಯೊಂದು ನಿಮಗೆ ಸಹಕಾರಿಯಾಗಲಿದೆ. ಆದರೆ ಅದಕ್ಕಾಗಿ ಸಾಲ ಮಾಡಬೇಕಾಗುವುದು.
ಮಕರ
ಇಂದು ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ ಅನವಶ್ಯಕ ಖರ್ಚಿನಿಂದಾಗಿ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ತಾಯಿಯ ಆರೋಗ್ಯ ವ್ಯತ್ಯಯವಾಗುವುದು. ಆಸ್ತಿಯ ವ್ಯವಹಾರಗಳು ಸದ್ಯಕ್ಕೆ ಬಗೆಹರಿಯುವುದಿಲ್ಲ. ವಾಹನ ಚಲಾವಣೆ ಮಾಡುವಾಗ ಎಚ್ಚರವಿರಲಿ.
ಕುಂಭ
ಇಂದು ಅನೇಕ ದೊಡ್ಡ ಯೋಜನೆಗಳನ್ನು ನಿರ್ವಹಿಸಿ ಅಗಾಧವಾದುದನ್ನು ಸಂಪಾದಿಸಲು ಕಾಲಘಟ್ಟ ಸೂಕ್ತವಾಗಿದೆ. ಆದರೂ ಕಾಣದ ಯಾವುದೋ ಒಂದು ಕೈ ತಮ್ಮ ಪ್ರಗತಿಯನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿದೆ. ಟೀಕೆ, ಟಿಪ್ಪಣಿಗಳಿಗೆ ಸಮರ್ಥವಾಗಿ ಉತ್ತರಿಸುವಿರಿ. ಆಸ್ತಿಯ ವಿಚಾರವನ್ನು ಸೂಕ್ಷತ್ರ್ಮ ರೀತಿಯಿಂದ ನಿರ್ವಹಿಸಿ. ಹಿರಿಯರು ಕೊಡುವ ಸಲಹೆಗಳನ್ನು ಗೌರವಿಸಿ. ವಿದ್ಯಾರ್ಥಿಗಳು ಉತ್ತಮ ಅವಕಾಶಗಳನ್ನು ಬಾಚಿಕೊಳ್ಳುವರು. ಗುರು ರಾಘವೇಂದ್ರರನ್ನು ಪಾಹಿ ಪ್ರಭೋ ಎಂದು ಪ್ರಾರ್ಥಿಸಿ.
ಮೀನ
ಇಂದು ಗೆಳೆಯರ ಬಳಿ ಸ್ನೇಹದಿಂದ ಇರುವುದು ಸೂಕ್ತ. ಆದರೆ ಯಾರಿಗೂ ಸಾಲ ಕೊಡುವುದು, ಕೊಡಿಸುವುದನ್ನು ಮಾಡದಿರಿ. ನೀವೂ ಸಾಲ ಪಡೆಯದಿರಿ. ಮನೆಯ ಲೆಕ್ಕಪತ್ರ ಅಥವಾ ಕಡತಗಳ ವಿಚಾರ, ವಿವಾದಗಳಿಗೆ ಕಾರಣವಾಗುವ ಸಂದರ್ಭ ಎದುರಾಗುವುದು. ಸರ್ಕಾರಿ ಹುದ್ದೆಯಲ್ಲಿರುವ ಉನ್ನತಾಧಿಕಾರಿಗಳಿಗೆ ಅತಿ ದೂರದ ಊರುಗಳಿಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ಅಂದುಕೊಂಡ ಕೆಲಸಗಳನ್ನು ನಿರ್ದಿಷ್ಟ ಸಮಯದಲ್ಲಿ ಮುಗಿಸಲು ಯತ್ನಿಸಿ. ಮನೆ ಕಟ್ಟುವ ವಿಷಯವನ್ನು ಅನವಶ್ಯಕವಾಗಿ ವಿಚಾರ ಮಾಡದೆ ಮುಂದೆ ಹೆಜ್ಜೆ ಇಡುವುದು ಉತ್ತಮ. ಅಮೂಲ್ಯ ವಸ್ತುಗಳು ಕಳೆದು ಹೋಗುವ ಸಂಭವವಿದ್ದು ಈ ಬಗ್ಗೆ ಜಾಗರೂಕರಾಗಿರಿ.

