ರಾಮನಗರ: ಇತ್ತೀಚೆಗೆ ಮುತ್ತಪ್ಪ ರೈ ಮಗನ ಮೇಲೆ ನಡೆದಿದ್ದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ರಿಕ್ಕಿ ರೈಗೆ ನೋಟಿಸ್ ಜಾರಿ ಮಾಡಲಾಗಿದ್ದು ವಿಚಾರಣೆಗೆ ಹಾಜರಾಗಲು ಅವರು ಇಪ್ಪತ್ತು ದಿನ ಕಾಲಾವಕಾಶ ಕೇಳಿದ್ದಾರೆ.
ರಿಕ್ಕಿ ರೈ ಅವರು ಮೆಡಿಕಲ್ ರಿಪೋರ್ಟ್ ಕೊಟ್ಟು ಸಮಯವಕಾಶ ಕೇಳಿದ್ದಾರೆ ಎಂದು ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಪ್ರಕರಣದ ಬೆಳವಣಿಗೆಯ ಬಗ್ಗೆ ಕೂಡಾ ಮಾತನಾಡಿದ್ದಾರೆ.
ಈ ಬಗ್ಗೆ ಹೇಳಿದ ಅವರು `ತನಿಖೆ ನಡೆಯುತ್ತಿದೆ. ಕೆಲವು ರಿಪೋರ್ಟ್ ಗಳು ಬರಲು ಬಾಕಿಯಿದೆ. ವರದಿ ಬಂದ ಬಳಿಕ ಚಾರ್ಜ್ ಶೀಟ್ ಫೈಲ್ ಮಾಡ್ತೇವೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ವಿಠಲ್. ರಿಕ್ಕಿ ರೈ ವಿಚಾರಣೆಗೆ ಹಾಜರಾದ ಬಳಿಕ ಮತ್ತಷ್ಟು ವಿಚಾರಗಳು ತಿಳಿದುಬರಬೇಕಿದೆ ಎಂದು ಹೇಳಿದ್ದಾರೆ.

