ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರಿನ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಬಾರ್ಕೂರು ನಿವಾಸಿ ರಾಜೀವ್ ಶೆಟ್ಟಿಯವರ ಪುತ್ರ ಪ್ರತಾಪ್ ಕುಮಾರ್ ಶೆಟ್ಟಿ (43) ಎಂದು ಗುರುತಿಸಲಾಗಿದೆ.
ದಿನಾಂಕ 07.04.2026 ರಂದು ಬ ಮನೆಯಲ್ಲಿ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ಬೆಂಗಳೂರಿಗೆ ಹೋಗದೇ ದಿನಾಂಕ 13.04.2026 ರಂದು ಬೆಳಿಗ್ಗೆ 11:00 ಗಂಟೆಗೆ ಕಾಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಡೂರು ಗುಡ್ಡೆಯಂಗಡಿಯಲ್ಲಿರುವ ಅಂಗಡಿಗೆ ಹೋಗಿ ವ್ಯವಹಾರ ಮಾಡಿದ್ದು, ನಂತರ ಕಾಡೂರು ಹೊಳೆಯ ಸಮೀಪದ ಕಲ್ಲಿನ ಮೇಲೆ ಫ್ಯಾಂಟ್, ಶರ್ಟ್, ಚಪ್ಪಲಿ ಹಾಗೂ ಮೊಬೈಲ್ ಫೋನ್ ಇಟ್ಟು ನಾಪತೀಯಾಗಿರುತ್ತಾರೆ. ನಂತರ ಅವರ ಪತ್ತೆಯ ಬಗ್ಗೆ ಎಲ್ಲ ಕಡೆ ಹುಡುಕಾಡಿದ್ದು ಅಲ್ಲದೇ ಮುಳುಗು ತಜ್ಞ ಸಹಾಯದಿಂದ ಹೊಳೆಯಲ್ಲಿಯೂ ಕೂಡ ಹುಡುಕಾಡಿಸಿದ್ದಲ್ಲಿ ಇದುವರೆಗೂ ಅವರು ಪತ್ತೆಯಾಗಿರುವುದಿಲ್ಲ.
ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ: 73/2026 U/S ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

