ತಾಂತ್ರಿಕ ಸೇವೆ, ಸಾಧನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿದ ಅವಿರತ ಕೊಡುಗೆಯನ್ನು ಗುರುತಿಸಿ ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿಗೆ ಭಾಜನವಾಗಿರುವ ಮಂಗಳೂರಿನ ಹೆಮ್ಮೆಯ ಸಂಸ್ಥೆ ಪವರ್ ಡ್ರೈವ್ ಇಂಜಿನಿಯರ್ಸ್. ತಮ್ಮ ಎಲೆಕ್ಟ್ರಿಕಲ್ ಮತ್ತು ಇನ್ಸ್ಟ್ರುಮೆಂಟೇಶನ್ ಸೇವೆಗಾಗಿ ಗುರುತಿಸಿ 2022ರಲ್ಲಿ ಪ್ರತಿಷ್ಠಿತ ಇಂಡಸ್ಟ್ರಿ ಔಟ್ ಲುಕ್ ಅವಾರ್ಡ್ ಕೂಡಾ ಸಂದಿದೆ. ಸುಮಾರು ಮೂವತ್ತು ವರ್ಷಗಳಿಂದಲೂ ಕಾರ್ಯಾಚರಿಸುತ್ತಿರುವ ಖ್ಯಾತ ಪವರ್ ಡ್ರೈವ್ ಇಂಜಿನಿಯರ್ಸ್ ಕಂಪೆನಿಗೆ ಇನ್ನೂರಕ್ಕೂ ಅಧಿಕ ಸಂತೃಪ್ತ ಗ್ರಾಹಕರಿದ್ದಾರೆ.
ಇಲ್ಲಿ ಕನ್ಸಲ್ಟನ್ಸಿ ಸರ್ವೀಸ್ ಗಳಾದ ಎಲೆಕ್ಟ್ರಿಕಲ್ ವಿನ್ಯಾಸ, ಲೋಡ್ ಶೇರಿಂಗ್, ಗ್ರಿಡ್ ಪ್ರೊಟೆಕ್ಷನ್, ಲೋಡ್ ಶೇರಿಂಗ್ ಹಾಗೂ ಫವರ್ ಸಿಸ್ಟಮ್ ಸ್ಟಡಿ ಸರ್ವೀಸ್ ಗಳಾದ ಫಾಲ್ಟ್ ಕ್ಯಾಲ್ಕುಲೇಷನ್, ಲೋಡ್ ಫ್ಲೋ ಸ್ಟಡಿ, ಹಾರ್ಮೋನಿಕ್ ಸ್ಟಡಿ ಇತ್ಯಾದಿ ಅನೇಕ ತಾಂತ್ರಿಕ ವಿಷಯಗಳ ಅಧ್ಯಯನ ಮತ್ತು ಫೀಲ್ಡ್ ಸರ್ವೀಸ್ ಗಳನ್ನು ಗಳಾದ ಡಿಜಿಟಲ್ ಥರ್ಮೋಗ್ರಫಿ, ರಿಲೆ ಟೆಸ್ಟಿಂಗ್, ಟ್ರಬಲ್ ಶೂಟಿಂಗ್, ಬ್ರೇಕರ್ ಟೆಸ್ಟಿಂಗ್ ಇತ್ಯಾದಿ ಅನೇಕ ಸೇವೆಗಳನ್ನು ಇಲ್ಲಿ ಪೂರೈಸಲಾಗುತ್ತದೆ.
ಇದೀಗ ಈ ಗ್ರಾಹಕರ ನೆಚ್ಚಿನ ಮತ್ತು ಕರಾವಳಿಯ ಹೆಮ್ಮೆಯ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಡಿಪ್ಲೊಮಾ ಮತ್ತು ಬಿ.ಇ ಪದವಿ ಮುಗಿಸಿರುವ ಅಭ್ಯರ್ಥಿಗಳಿಗೆ ಉತ್ತಮ ಉದ್ಯೋಗವಕಾಶಗಳಿವೆ. ಈ ಹಿಂದೆ ಇಲ್ಲಿ ಕೆಲಸ ನಿರ್ವಹಿಸಿದ ಎಲ್ಲಾ ಉದ್ಯೋಗಿಗಳು ತಮ್ಮ ವೃತ್ತಿ ಜೀವನದಲ್ಲಿ ಅತ್ಯುತ್ತಮ ಅನುಭವವನ್ನು ಪಡೆದಿದ್ದಾರೆ.
ಇದೀಗ ಈ ಕಂಪೆನಿಗೆ ಬಿಇ, ಡಿಪ್ಲೋಮಾ ಅಥವಾ ಐಟಿಐ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸ್ಥಳೀಯ ಪುರುಷ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು mail@powerdriveengineers.com ಈ ಇಮೇಲ್ ಗೆ ಕಳುಹಿಸಬಹುದು. ನೇರ ಸಂದರ್ಶನಕ್ಕಾಗಿ 09945538803 ಈ ನಂಬರನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗೆ ಪವರ್ ಡ್ರೈವ್ ಇಂಜಿನಿಯರ್ಸ್ ಕಂಪೆನಿ, ಎಸ್ಸೆಲ್ ಸೆಂಟರ್ ನೆಲ ಮಹಡಿ, ಎಂ.ಜಿ ರೋಡ್ ಮಂಗಳೂರು ಇಲ್ಲಿಗೆ ಭೇಟಿ ನೀಡಬಹುದು.


