ಮೇಷ
ಇಂದು ಮೇಷ ರಾಶಿಯವರಿಗೆ ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆಯಿಂದಿರಲು ಪ್ರಯತ್ನಿಸಿ. ಪ್ರೀತಿಯ ಸಂಬಂಧಗಳಲ್ಲಿ ಕೆಲವು ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಉಂಟಾಗುವುದರಿಂದ ಪರಸ್ಪರ ಪ್ರಚೋದಿಸುವುದು ಹೆಚ್ಚಾಗುತ್ತದೆ. ಇದು ಇಬ್ಬರ ಮಧ್ಯೆ ಅಂತರವನ್ನು ತಂದಿಡಬಹುದು. ಹಾಗಾಗಿ ಸಂಗಾತಿಯೊಂದಿಗೆ ಆದಷ್ಟು ಆತ್ಮೀಯತೆಯಿಂದ ಇರಲು ಪ್ರಯತ್ನಿಸಿ. ಜೀವನಸಂಗಾತಿಯೊಂದಿಗೆ ಕಲಹಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಣ್ಣ ಸಂಗತಿಗಳೇ ದೊಡ್ಡ ಕಲಹಕ್ಕೆ ಕಾರಣವಾಗಬಹುದು. ಆದ್ದರಿಂದ ಸಣ್ಣ ವಿಷಯವನ್ನೇ ದೊಡ್ಡದು ಮಾಡುವ ಮೊದಲು ಅದನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದು. ಸಂಗಾತಿಯೊಂದಿಗೆ ಆದಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸಿ. ಈ ತಿಂಗಳಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಈ ತಿಂಗಳು ಗಾಯಗಳಾಗುವ ಸಾಧ್ಯತೆ ಹಾಗೂ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಬಹುದು.
ವೃಷಭ
ಇಂದು ವೃಷಭ ರಾಶಿಯವರಿಗೆ ಅನಗತ್ಯ ಕೌಟುಂಬಿಕ ವಿವಾದಗಳು ಉಂಟಾಗಬಹುದು. ಕುಟುಂಬದಲ್ಲಿ ಉದ್ವಿಗ್ನತೆಯ ವಾತಾವರಣ ಕಂಡುಬರಬಹುದು. ತಂದೆ ತಾಯಿಯೊಂದಿಗಿನ ಸಂಬಂಧಗಳು ಹದಗೆಡಬಹುದು ಹಾಗೂ ತಂದೆ ತಾಯಿಗಳ ಆರೋಗ್ಯದಲ್ಲಿ ಏರುಪೇರು ಕಂಡುಬರಬಹುದು. ಇದರಿಂದಾಗಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು. ರಿಯಲ್ ಎಸ್ಟೇಟ್ ಅಥವಾ ಹಣಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ವಿವಾದ ಉಂಟಾಗುವುದು, ಇಂತಹ ಸಂದರ್ಭದಲ್ಲಿ ಕುಟುಂಬದ ಸದಸ್ಯರ ಸಲಹೆಯನ್ನು ಪಡೆದು, ಅವರೊಂದಿಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ನೀವು ಪ್ರಮುಖ ಪಾತ್ರ ವಹಿಸಬಹುದು. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದಲ್ಲಿ ಅವರ ಮೇಲೆ ಸಂಪೂರ್ಣ ನಂಬಿಕೆ ಇರಿಸಿ. ಈ ತಿಂಗಳಿನಲ್ಲಿ ಆರ್ಥಿಕ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಹಣಕಾಸಿನ ಅನಗತ್ಯ ವ್ಯವಹಾರದಲ್ಲಿ ತೊಡಗಿಕೊಳ್ಳದಿರುವುದು ಒಳ್ಳೆಯದು. ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು.
ಮಿಥುನ
ಇಂದು ಮಿಥುನ ರಾಶಿಯವರು ನೀವು ಮುಕ್ತ ಮನಸ್ಸಿನ ವ್ಯಕ್ತಿಯಾಗಿರುವುದರಿಂದ ನಿಮ್ಮ ಆಲೋಚನಾ ಶಕ್ತಿ ಹಾಗೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯವು ನಿಮ್ಮಲ್ಲಿ ಬಲವಾಗಿದೆ. ಕುಟುಂಬದ ಎಲ್ಲ ಸದಸ್ಯರೊಂದಿಗೆ ಆತ್ಮೀಯತೆಯಿಂದ ಇದ್ದು ಎಲ್ಲರ ನಂಬಿಕೆಯನ್ನು ಗಳಿಸಲು ಪ್ರಯತ್ನಿಸಿ. ದಾಂಪತ್ಯ ಜೀವನದಲ್ಲಿ ಮಾನಸಿಕ ಕ್ಲೇಶಗಳು ಉಂಟಾಗಬಹುದು, ಮೂರನೇ ವ್ಯಕ್ತಿಯಿಂದಾಗಿ ನಿಮ್ಮ ಹಾಗೂ ನಿಮ್ಮ ಸಂಗಾತಿಯ ಮಧ್ಯೆ ಸಮಸ್ಯೆಗಳು ಉದ್ಭವಿಸಬಹುದು, ಇದರಿಂದಾಗಿ ಅಪನಂಬಿಕೆ ಉಂಟಾಗಬಹುದು ಹಾಗಾಗಿ ನಿಮ್ಮ ಸಂಗಾತಿಯ ಮೇಲೆ ಸಂಪೂರ್ಣ ನಂಬಿಕೆಯನ್ನಿಡಿ. ಈ ತಿಂಗಳಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಆರ್ಥಿಕ ಲಾಭ ಗಳಿಸುವಂತಹ ಅವಕಾಶವನ್ನು ಪಡೆಯುವಿರಿ. ಈ ತಿಂಗಳು ಕೀಲು ನೋವು ಅಥವಾ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರಬಹುದು. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕಟಕ
ಕಟಕ ರಾಶಿಯವರಿಗೆ ಇಂದು ನಿಮ್ಮ ಪೋಷಕರೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಜೊತೆಗೆ ಪೋಷಕರ ಬೆಂಬಲವನ್ನೂ ನೀವು ಪಡೆಯುವಿರಿ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದಲ್ಲಿ ಅದನ್ನು ಅವರೊಂದಿಗೆ ವ್ಯಕ್ತಪಡಿಸುವ ಅವಕಾಶ ಲಭಿಸುವುದು. ನೀವು ಮಾಡುವಂತಹ ಕಾರ್ಯಗಳು ಯಶಸ್ವಿಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಆರ್ಥಿಕವಾಗಿಯೂ ಅಭಿವೃದ್ಧಿಯನ್ನು ಸಾಧಿಸುವಿರಿ. ಜೊತೆಗೆ ಹಣ, ಸಂಪತ್ತಿನೊಂದಿಗೆ ಗೌರವವನ್ನೂ ಪಡೆಯುವಿರಿ. ಈ ತಿಂಗಳಲ್ಲಿ ಶೀತ, ಅಲರ್ಜಿಗೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅತಿಯಾಗಿ ಯೋಚಿಸುವುದನ್ನು ತಪ್ಪಿಸಿ. ನಿಮ್ಮ ಆರ್ಥಿಕ ವ್ಯವಹಾರಗಳಲ್ಲಿ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಿ. ಸಂಜೆ, ಪ್ರೀತಿಪಾತ್ರರ ಜೊತೆ ಮಾತನಾಡುವುದು ನಿಮ್ಮ ಮನಸ್ಸನ್ನು ಹಗುರಗೊಳಿಸಲು ಮತ್ತು ನಿಮ್ಮ ಮನಸ್ಸನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ.
ಸಿಂಹ
ಇಂದು ಸಿಂಹ ರಾಶಿಯವರು ನೀವು ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಯಾದ್ದರಿಂದ ಮಾಡುವ ಕೆಲಸವನ್ನು ಮನಸ್ಸಿಟ್ಟು ಮಾಡುವಿರಿ. ಯಾವುದೇ ಕೆಲಸವಾಗಲಿ ಜವಾಬ್ದಾರಿಯಿಂದ ಮಾಡುವಂತಹ ವ್ಯಕ್ತಿತ್ವ ನಿಮ್ಮದು. ಈ ತಿಂಗಳಲ್ಲಿ ನಿಮ್ಮ ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ಮನೆಯ ಕುಟುಂಬ ಸದಸ್ಯರೊಂದಿಗೆ ಆತ್ಮೀಯತೆ, ಪರಸ್ಪರ ಸಾಮರಸ್ಯವನ್ನು ಕಾಪಾಡಿಕೊಳ್ಳುವುದರಿಂದ ನಿಮಗೆ ಅನುಕೂಲವಾಗುವುದು. ಸಂಗಾತಿಗಳ ಮಧ್ಯೆ ಅನಗತ್ಯ ವಿವಾದವು ಸಂಭವಿಸಬಹುದು. ಪರಸ್ಪರ ಹೊಂದಾಣಿಕೆಯಿಂದ ಬರುವಂತಹ ಸಮಸ್ಯೆಗಳನ್ನು ನಿವಾರಿಸಬಹುದು. ದಾಂಪತ್ಯ ಜೀವನವು ಈ ತಿಂಗಳು ಉತ್ತಮವಾಗಿರಲಿದೆ. ಹಣಕಾಸಿನ ವ್ಯವಹಾರಗಳು ಈ ತಿಂಗಳಲ್ಲಿ ಲಾಭವಾಗಿ ಪರಿಣಮಿಸುತ್ತವೆ. ಆದರೆ ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರುವುದು ಒಳ್ಳೆಯದು. ಅನಗತ್ಯವಾಗಿ ಯಾರಿಗೂ ಸಾಲ ನೀಡಲು ಹೋಗದಿರಿ. ನಿಮ್ಮ ವ್ಯವಹಾರದಲ್ಲಿ ಮಾತ್ರ ಹಣವನ್ನು ಹೂಡಿಕೆ ಮಾಡಿ. ಇದರಿಂದ ಆರ್ಥಿಕ ಸ್ಥಿತಿ ಬಲವಾಗುತ್ತದೆ. ಕೀಲು ನೋವು ಹಾಗೂ ಮೊಣಕಾಲು ನೋವು ಕಂಡುಬರಬಹುದು.
ಕನ್ಯಾ
ಕನ್ಯಾ ರಾಶಿಯವರಿಗೆ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಸಮಾನವಾಗಿ ಬೆರೆಯುವಿರಿ ಹಾಗೂ ಪರಸ್ಪರ ಸಹಾನುಭೂತಿಯನ್ನು ಹೊಂದಲಿದ್ದೀರಿ. ಕುಟುಂಬದಲ್ಲಿ ಒಬ್ಬರಿಗೊಬ್ಬರು ಹೊಂದಾಣಿಕೆ ಇದ್ದಲ್ಲಿ ಮಾತ್ರ ಶಾಂತಿಯನ್ನು ಕಾಣಬಹುದು. ಇಲ್ಲದಿದ್ದರೆ ಅನಗತ್ಯ ವಿವಾದಗಳು ಉಂಟಾಗಬಹುದು. ಯಾಕೆಂದರೆ ಶನಿ ಮಂಗಳ ಸಂಚಾರವು ಕೌಟುಂಬಿಕ ಸಮಸ್ಯೆಗಳು ಉದ್ಭವಿಸಬಹುದು. ಸ್ನೇಹಿತರೊಂದಿಗೆ ವಿವಾದಗಳು ಸಂಭವಿಸಬಹುದು. ಇದರಿಂದಾಗಿ ಸ್ನೇಹಿತರು ನಿಮ್ಮಿಂದ ದೂರವಾಗಬಹುದು. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಿ. ಇಲ್ಲದಿದ್ದರೆ ಅತ್ತೆ ಮನೆಯವರೊಂದಿಗೆ ಕಲಹವು ಹೆಚ್ಚಾಗಬಹುದು. ಈ ತಿಂಗಳಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯು ಬಲವಾಗಿರುತ್ತದೆ. ನೀವು ಮಾಡುವಂತಹ ಕೆಲಸದಲ್ಲಿ ಯಶಸ್ಸನ್ನು ಸಾಧಿಸುವಿರಿ. ಈ ತಿಂಗಳು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು.
ತುಲಾ
ತುಲಾ ರಾಶಿಯವರಿಗೆ ಇಂದು ಆತ್ಮವಿಶ್ವಾಸದ ಕೊರತೆ ಕಂಡುಬರಬಹುದು. ಯಾವ ಕೆಲಸವನ್ನು ಉತ್ಸಾಹದಿಂದ ಮಾಡುತ್ತೀರೋ, ಆ ಕೆಲಸದಲ್ಲಿ ಅಡಚಣೆಗಳು ಕಂಡುಬರಬಹುದು. ಆದ್ದರಿಂದ ಯಾವುದೇ ಕೆಲಸವನ್ನು ಮಾಡುವಾಗ ಬುದ್ಧಿವಂತಿಕೆಯಿಂದ ಮಾಡಿ. ಈ ತಿಂಗಳಲ್ಲಿ ಕುಟುಂಬದಲ್ಲಿ ಉತ್ತಮ ವಾತಾವರಣ ಕಂಡುಬರಲಿದೆ. ಪರಸ್ಪರ ಸಾಮರಸ್ಯದಿಂದ ಯಾವುದೇ ಕೆಲಸದಲ್ಲೂ ಜಯವನ್ನು ಸಾಧಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದುವಿರಿ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದಲ್ಲಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಅವಕಾಶ ದೊರೆಯುವುದು. ನಿಮ್ಮ ಸಂಗಾತಿಯ ಮೇಲೆ ನಂಬಿಕೆ ಇರಿಸಿ ಹಾಗೂ ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ. ಈ ತಿಂಗಳಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಅವಕಾಶಗಳು ಒದಗಿಬರುತ್ತದೆ. ಈ ತಿಂಗಳ ಮೊದಲಾರ್ಧವು ಒತ್ತಡದಿಂದ ಕೂಡಿದರೂ, ದ್ವಿತೀಯಾರ್ಧದಿಂದ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ. ಆದ್ದರಿಂದ ಆರ್ಥಿಕ ಲಾಭ ಪಡೆಯುವಂತಹ ಕಾರ್ಯಗಳನ್ನು ಆದಷ್ಟು ಶ್ರಮವಹಿಸಿ ಮಾಡಿ. ಇದರಿಂದಾಗಿ ನೀವು ಯಶಸ್ಸನ್ನು ಪಡೆಯಬಹುದು. ಈ ತಿಂಗಳಲ್ಲಿ ಶೀತ, ಜ್ವರ ಇತ್ಯಾದಿ ಸಮಸ್ಯೆಗಳು ಉದ್ಭವಿಸಬಹುದು.
ವೃಶ್ಚಿಕ
ಇಂದು ವೃಶ್ಚಿಕ ರಾಶಿಯವರಿಗೆ ನಿಮ್ಮ ಕುಟುಂಬದವರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಕುಟುಂಬದಲ್ಲಿ ಸಂತೋಷವನ್ನು ಪಡೆಯುವಿರಿ. ಆತ್ಮವಿಶ್ವಾಸದಿಂದ ಕೆಲಸವನ್ನು ಮಾಡಿದರೆ ಉತ್ತಮ ಪ್ರತಿಫಲವನ್ನು ಪಡೆಯಬಹುದು. ವಿವಾಹಯೋಗ್ಯರಿಗೆ ಕಂಕಣ ಭಾಗ್ಯ ಒದಗಿ ಬರಲಿದೆ. ಆರ್ಥಿಕ ಲಾಭವನ್ನು ಪಡೆಯಲು ಉತ್ತಮ ಅವಕಾಶವನ್ನು ಪಡೆಯುವಿರಿ. ಧೈರ್ಯ ಮತ್ತು ಉತ್ಸಾಹದಿಂದ ಮಾಡುವ ಕೆಲಸಗಳಲ್ಲಿ ಪ್ರಯೋಜನವನ್ನು ಪಡೆಯುವಿರಿ. ನೀವು ಮಾಡುವಂತಹ ಉದ್ಯೋಗ ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುವಿರಿ. ನೀವು ಯಾವುದಾದರೂ ಕೆಲಸ ಮಾಡಲು ಎದುರು ನೋಡುತ್ತಿದ್ದರೆ ಖಂಡಿತವಾಗಿಯೂ ಮಾಡಬಹುದು. ಅದರಲ್ಲೂ ಯಶಸ್ಸನ್ನು ಸಾಧಿಸುವಿರಿ. ನೀವು ಕೃಷಿಕರಾಗಿದ್ದಲ್ಲಿ, ಈ ಮೂಲದಿಂದಲೂ ಲಾಭವನ್ನು ಪಡೆಯಬಹುದು. ನೀವು ಉದ್ಯೋಗದಲ್ಲಿದ್ದೂ, ಇತರ ವ್ಯವಹಾರಗಳಲ್ಲಿ ತೊಡಗಿಸಿಕೊಂಡರೂ ಯಶಸ್ಸನ್ನು ಪಡೆಯಬಹುದು. ಯಾವುದೇ ಆರೋಗ್ಯದ ಸಮಸ್ಯೆಗಳು ಉದ್ಭವಿಸಬಹುದು.
ಧನು
ಇಂದು ನೀವು ಕೆಲಸ ಮಾಡುವ ಸ್ಥಳದಲ್ಲಿ ಉದ್ವಿಗ್ನತೆಯ ವಾತಾವರಣ ಕಂಡುಬರಬಹುದು. ಕೆಲಸದ ಬಗ್ಗೆ ಓಡಾಡ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ನೀವು ಎಷ್ಟು ಶ್ರಮವನ್ನು ಪಡುತ್ತೀರೋ ಅಷ್ಟೇ ಲಾಭವನ್ನೂ ಗಳಿಸುವಿರಿ. ಕರ್ಮದಲ್ಲಿ ಹೆಚ್ಚಿನ ನಂಬಿಕೆ ಇಡಿ. ಇದರಿಂದ ಹೆಚ್ಚಿನ ಯಶಸ್ಸನ್ನು ಪಡೆಯಬಹುದು. ಈ ತಿಂಗಳು ಕುಟುಂಬ ಸದಸ್ಯರೊಡನೆ ಉತ್ತಮ ಬಾಂಧವ್ಯವನ್ನು ಹೊಂದುವಿರಿ. ನಿಮ್ಮ ಸಂಗಾತಿಯೊಂದಿಗಿನ ಆತ್ಮೀಯತೆಯು ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದು. ಹೊಸ ವ್ಯಕ್ತಿಗಳನ್ನು ಭೇಟಿ ಮಾಡುವಿರಿ. ಶುಕ್ರನು ವೃಶ್ಚಿಕ ರಾಶಿಯಲ್ಲಿ ಸಂಚರಿಸುವುದರಿಂದ ಹಾಗೂ ಸೂರ್ಯನು ತುಲಾ ರಾಶಿಯಲ್ಲಿ ಸಂಚರಿಸುವುದರಿಂದ ಈ ತಿಂಗಳಲ್ಲಿ ಆರ್ಥಿಕ ಲಾಭ ಗಳಿಸುವ ಪ್ರಯತ್ನಗಳು ವಿಫಲವಾಗಬಹುದು. ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು. ಆದ್ದರಿಂದ ಆರ್ಥಿಕ ಲಾಭ ಗಳಿಸುವ ಬಗ್ಗೆ ಎಚ್ಚರವಹಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು.
ಮಕರ
ಇಂದು ನಿಮಗೆ ಅನುಕೂಲಕರವಾಗಿರಬಹುದು. ತೊಂದರೆಗಳು ಉದ್ಭವಿಸಬಹುದು. ಕೆಲಸದ ಬಗ್ಗೆ ಹೆಚ್ಚಿನ ಓಡಾಟ ಮಾಡಬೇಕಾಗಿ ಬರಬಹುದು. ಕೆಲಸದ ಹೊರೆಗಳು ಹೆಚ್ಚಾಗಿರುವುದರಿಂದ ಒತ್ತಡಗಳೂ ಹೆಚ್ಚಾಗುವವು. ಆರ್ಥಿಕ ಲಾಭ ಪಡೆಯಲು ಉತ್ತಮ ಅವಕಾಶಗಳು ಒದಗಿ ಬರುವವು. ಆದರೆ ಇದರೊಂದಿಗೆ ಕಠಿಣ ಶ್ರಮವನ್ನು ಪಡಬೇಕಾದೀತು. ನೀವು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುವುದರೊಂದಿಗೆ ನಿಮ್ಮ ಕೆಲಸವನ್ನೂ ಯಶಸ್ಸಿನತ್ತ ಕೊಂಡೊಯ್ಯಲು ಪ್ರಯತ್ನಿಸುವಿರಿ. ಈ ತಿಂಗಳು ಅದೃಷ್ಟವು ನಿಮ್ಮೊಂದಿಗಿರುವುದು. ಆದರೆ ಓಡಾಟಗಳು ಹೆಚ್ಚಾಗುವುದು. ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವಿರಿ. ಪ್ರೀತಿಯ ಸಂಬಂಧಗಳು ಹೊಸ ಹುರುಪನ್ನು ಪಡೆದುಕೊಳ್ಳುವವು. ಕೀಲುನೋವು, ಮೊಣಕಾಲು ನೋವಿನ ಸಮಸ್ಯೆಗಳು ಉಂಟಾಗಬಹುದು. ಇಂತಹ ಪರಿಸ್ಥಿತಿಗಳಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದಿರಿ.
ಕುಂಭ
ಕುಂಭ ರಾಶಿಯವರಿಗೆ ಇಂದು ಕುಟುಂಬದ ಪರಿಸ್ಥಿತಿಗಳು ಒತ್ತಡವನ್ನುಂಟು ಮಾಡಬಹುದು. ಅನಗತ್ಯ ವಿಚಾರದಲ್ಲಿ ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ಮೂರನೇ ವ್ಯಕ್ತಿಯಿಂದ ಕುಟುಂಬದಲ್ಲಿ ಒತ್ತಡಗಳು ಉಂಟಾಗಬಹುದು. ಹಣದ ವಿಚಾರವಾಗಿ ವಿವಾದಗಳು ಉಂಟಾಗಬಹುದು. ಆದ್ದರಿಂದ ಕುಟುಂಬದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಮೊದಲನೆಯದಾಗಿ ನಿಮ್ಮ ಸಂಗಾತಿಯೊಂದಿಗಿನ ಬಾಂಧವ್ಯ ಚೆನ್ನಾಗಿಡಲು ಪ್ರಯತ್ನಿಸಿ. ಪರಸ್ಪರರಲ್ಲಿ ನಂಬಿಕೆಯನ್ನು ಇರಿಸಿ ಹಾಗೂ ನಿಮ್ಮ ಜವಾಬ್ದಾರಿಯನ್ನು ಪೂರೈಸಲು ಪ್ರಯತ್ನಿಸಿ. ಪ್ರಯಾಣಕ್ಕೆ ಸಂಬಂಧಿಸಿದಂತೆ ಹಾಗೂ ಹೊರಗಿನ ಕೆಲಸಗಳಲ್ಲಿ ನಿಮ್ಮ ಸಂಗಾತಿಯ ಸಲಹೆಯನ್ನು ಪಡೆಯಿರಿ. ಈ ತಿಂಗಳು ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಲಾಭವನ್ನು ಗಳಿಸಲು ಮಾಡುವಂತಹ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುವಿರಿ.
ಮೀನ
ಇಂದು ಅನಗತ್ಯ ಸಮಸ್ಯೆಗಳು ಉದ್ಭವಿಸಬಹುದು. ಯಾವುದೇ ಕೆಲಸವನ್ನು ಮಾಡಲು ಆತ್ಮವಿಶ್ವಾಸದ ಕೊರತೆ ಕಂಡುಬರಬಹುದು. ಮನಸ್ಸು ಗೊಂದಲಮಯವಾಗಿರುವುದರಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದಿರಬಹುದು. ಹಾಗಾಗಿ ಯಾವುದೇ ಕೆಲಸವನ್ನು ಮಾಡುವ ಸಾಕಷ್ಟು ಚಿಂತನೆ ನಡೆಸಿ, ನಿರ್ಧಾರವನ್ನು ತೆಗೆದುಕೊಳ್ಳಿ. ಇದರಿಂದ ಯಶಸ್ಸನ್ನು ಪಡೆಯಬಹುದು. ಈ ತಿಂಗಳಲ್ಲಿ ಪ್ರೀತಿಯ ಸಂಬಂಧಗಳು ಉತ್ತಮವಾಗಿರುತ್ತದೆ. ಆರ್ಥಿಕ ಪರಿಸ್ಥಿತಿಯೂ ಪ್ರಬಲವಾಗಿರುತ್ತದೆ. ಹಣವನ್ನು ಉತ್ತಮ ಅವಕಾಶವನ್ನು ಪಡೆಯುವಿರಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಒತ್ತಡದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

