ಕುಂದಾಪುರ: ಮಹಿಳೆ ಕಾಣೆಯಾಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾಗಿರುವ ಮಹಿಳೆ
ಅನಿತಾ ಆರ್ (36)
ಕಟ್ ಬೆಲ್ತೂರು ಇಂದಿರಾ ನಗರದ ನಿವಾಸಿಯಾಗಿದ್ದು ಕುಂದಾಪುರ ತಾಲೂಕು ಪಂಚಾಯತ್ ಕಛೇರಿಯಲ್ಲಿ ಅರೆಕಾಲಿಕ ಕೂಲಿ ಕೆಲಸ ಮಾಡಿಕೊಂಡಿದ್ದರು.
ಅವರು ಏಪ್ರಿಲ್ 22 ರಂದು ಮನೆಯಿಂದ ಕೆಲಸಕ್ಕೆoದು ಕುಂದಾಪುರಕ್ಕೆ, ಇಬ್ಬರು ಮಕ್ಕಳ ಜೊತೆಗೆ ಹೋಗಿ ಆ ಮಕ್ಕಳನ್ನು ಕಾಳಾವರಕ್ಕೆ ಬಸ್ಸಿನಲ್ಲಿ ಕಳುಹಿಸಿಕೊಟ್ಟ ನಂತರ ಕಾಣೆಯಾಗಿದ್ದಾರೆ. ಅವರ ಫೋನ್ ಸ್ವಿಚ್ ಆಫ್ ಆಗಿದ್ದು, ಕುಂದಾಪುರ ತಾಲೂಕು ಕಛೇರಿಯಲ್ಲಿ ವಿಚಾರಿಸಿದಾಗ ಅವರು ಕೆಲಸಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆಂದು ಮಹಿಳೆಯ ಗಂಡ ರಾಘವೇಂದ್ರ ಪೊಲೀಸರಿಗೆ ತಿಳಿಸಿದ್ದಾರೆ.

