ನವದೆಹಲಿ: ಸರ್ಕಾರಿ ಸ್ವಾಮ್ಯದ ಗಾರ್ಡನ್ ರೀಚ್ ಶಿಪ್ಬಿಲ್ಡಿಂಗ್ ಮತ್ತು
ಇಂಜಿನಿಯರ್ಸ್ ಸಂಸ್ಥೆ (ಜಿಆರ್ಎಸ್ಇ) ನಿರ್ಮಿಸಿರುವ ಮೂರು ಹೊಸ ಹಡಗುಗಳು ಸೋಮವಾರ ಭಾರತೀಯ ನೌಕಾ ಪಡೆಗೆ ಸೇರ್ಪಡೆಗೊಂಡವು. ದುನಾಗಿರಿ, ಸಂಶೋಧಕ್ ಮತ್ತು ಅಗ್ರಯ್ ಹೆಸರಿನ ಈ ಮೂರು ನೌಕೆಗಳು ನೇವಿಯ ಒಟ್ಟಾರೆ ಸಮರ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ. ದುನಾಗಿರಿ ನೌಕೆಯು ನೀಲಗಿರಿ ವರ್ಗದ 5ನೇ ಹಡಗಾಗಿದೆ. ಬ್ರಹ್ಮಸ್ ಕ್ಷಿಪಣಿ, ರಾಕೆಟ್ ಮತ್ತು ಟಾರ್ಪೆಡೋ ಸಹಿತ ಹಲವು ಶಸ್ತ್ರಾಸ್ತ್ರಗಳನ್ನು ಇದರಲ್ಲಿ ಅಳವಡಿಸಲಾಗಿದೆ.


