ಮಧುರೈ: ದೇಶಾದ್ಯಂತ ಸುದ್ದಿಯಾಗಿದ್ದ ತಂದೆ ಮಗನ ಲಾಕಪ್ ಡೆಟ್ ಗೆ ಸಂಬಂಧಿಸಿದಂತೆ ಒಟ್ಟು ಒಂಭತ್ತು ಜನ ಪೊಲೀಸರಿಗೆ ಮರಣ ದಂಡನೆ ವಿಧಿಸಿ ನಿನ್ನೆ ಮಧುರೈ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ .
ಈ ದೌರ್ಜನ್ಯ ಪ್ರಕರಣ ಸಂಭವಿಸಿದಾಗ ದೇಶಾದ್ಯಂತ ಪೊಲೀಸರ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಮದ್ರಾಸ್ ಹೈಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ನಡೆಸಿದ ತನಿಖೆಯಲ್ಲಿ ನೂರಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಪ್ರಕರಣಕ್ಕೆ ತಿರುವುಕೊಟ್ಟ ಮಹಿಳಾ ಕಾನ್ಸ್ ಸ್ಟೇಬಲ್!

ಆರಂಭದಲ್ಲಿ ಸ್ಥಳೀಯ ಪೊಲೀಸರು ಸಾಕ್ಷ್ಯ ನಾಶಮಾಡಲು ತೀವ್ರ ಪ್ರಯತ್ನ ನಡೆಸಿದ್ದರು. ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಡಿಲೀಟ್ ಮಾಡಲಾಗಿತ್ತು. ಆದರೆ ಠಾಣೆಯಲ್ಲಿದ್ದ ಮಹಿಳಾ ಕಾನ್ಸ್ ಸ್ಟೇಬಲ್ ಒಬ್ಬರು ಸಿಬಿಐ ಗೆ ನೀಡಿದ ಹೇಳಿಕೆ ಪ್ರಕರಣಕ್ಕೆ ಅತಿದೊಡ್ಡ ತಿರುವು ನೀಡಿತ್ತು. ತಂದೆ ಮಗನನ್ನು ಪೊಲೀಸರು ರಾತ್ರಿಯಿಡೀ ಬೆತ್ತಲೆಗೊಳಿಸಿ , ಲಾಠಿಗಳಿಂದ ಅಮಾನವೀಯವಾಗಿ ಹೊಡೆದಿದ್ದರು. ಟೇಬಲ್ ಮತ್ತು ಗೋಡೆಯ ಮೇಲೆ ರಕ್ತದ ಕಲೆಗಳಾಗಿದ್ದವು ಎಂದು ಸಾಕ್ಷ್ಯ ನುಡಿದಿದ್ದರು. ಇಂದು ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ತನಿಖಾ ತಂಡಕ್ಕೆ ಅತಿದೊಡ್ಡ ತಿರುವು ನೀಡಿತ್ತು.
ಆರು ವರ್ಷಗಳ ನಂತರ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಿದ್ದು, ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಪೊಲೀಸರಿಗೆ ಈ ತೀರ್ಪು ಅತಿದೊಡ್ಡ ಎಚ್ಚರಿಕೆಯ ಕರೆಗಂಟೆಯಾಗಿದೆ.

