ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ 600 ರಲ್ಲಿ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮನ ಗಳಿಸಿದ ಬಗ್ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿನಿಯ ಸಾಧನೆಯನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ.
ಮೂರು ಪರೀಕ್ಷೆ ಬರೆಯುವಷ್ಟರಲ್ಲಿ ಆಕೆಯ ತಾಯಿ ಅನಾರೋಗ್ಯದಿಂದ ನಿಧನ ಹೊಂದಿದರೂ ಧೃತಿಗೆಡದೆ ದಿಶಾ ಅವರು ಹೋರಾಟ ಮನೋಭಾವದಿಂದ ಉಳಿದ ಪರೀಕ್ಷೆಗಳನ್ನು ಬರೆದು ಎಲ್ಲಾ 6 ವಿಷಯಗಳಲ್ಲಿ 100 ಕ್ಕೆ ನೂರು ಅಂಕ ಗಳಿಸಿದ್ದಾರೆ. ದಿಶಾ ನಮ್ಮ ಹೆಮ್ಮೆಯ ವಿದ್ಯಾರ್ಥಿನಿ.
ಆಕೆಯ ಸಾಧನೆಯನ್ನು ಗುರುತಿಸಿ ಈ ವರ್ಷ 3 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. ಆಕೆ ಸಿ.ಎ. ಮಾಡಲು ಬಯಸಿದ್ದು, ಅಕೆಯ ಪಾಲಕನ ಸ್ಥಾನದಲ್ಲಿ ನಿಂತು ಉಚಿತವಾಗಿ ಶಿಕ್ಷಣ ನೀಡಲು ದೃಢ ಸಂಕಲ್ಪ ಮಾಡಿದ್ದೇನೆ ಎಂದು ಡಾ. ಮೋಹನ್ ಆಳ್ವ ಅವರು ತಿಳಿಸಿದ್ದಾರೆ.

