ಟೆಹ್ರಾನ್: 48 ಗಂಟೆಯೊಳಗೆ ಹಾರ್ಮುಜ್ ಜಲಸಂಧಿ ಮುಕ್ತವಾಗದಿದ್ದರೆ ಕಂಡು ಕೇಳರಿಯದ ರೀತಿಯಲ್ಲಿ ದಾಳಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ್ದ ವಾರ್ನಿಂಗ್ ಗೆ ಇರಾನ್ ಡೋಂಟ್ ಕೇರ್ ಅಂದಿದೆ.
ಕಳೆದ 48 ವರ್ಷಗಳಿಂದ ಇಂತಹ ಬೆದರಿಕೆಗಳನ್ನು ಎದುರಿಸುತ್ತಲೇ ಬಂದಿದ್ದೇವೆ. ಹಾಗಾಗಿ ಈ ಬೆದರಿಕೆಗಳಿಗೆಲ್ಲ ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದೆ. ಅಲ್ಲದೆ ಟ್ರಂಪ್ ಗೆ ಶಾಶ್ವತ ಯುದ್ಧ ವಿರಾಮಕ್ಕೆ ಆಸಕ್ತಿಯಿಲ್ಲ, ಹಾಗಾಗಿ ನಾವು ಇಂತಹ ತಾತ್ಕಾಲಿಕ ಪರಿಹಾರಕ್ಕೆ ಸಿದ್ದವಿಲ್ಲ ಎಂದು ತಿಳಿಸಿದೆ.
ಇದರ ನಡುವೆ ಇರಾನ್ ಸೇನೆ ಅಮೆರಿಕದ ಡ್ರೋನ್ ಒಂದನ್ನು ಹೊಡೆದುರುಳಿಸಿದೆ. ಅಮೆರಿಕ ಸೇನೆಯ MQ-9 ಹೆಸರಿನ ಡ್ರೋನ್ ಅನ್ನು ಹೊಡೆದುರುಳಿಸಿದೆ.
ಏತನ್ಮಧ್ಯೆ ಅಮೆರಿಕ- ಇಸ್ರೇಲ್ ಜಂಟಿ ದಾಳಿ ಮುಂದುವರೆದಿದ್ದು ಇರಾನ್ ನ ಇಬ್ಬರು ಪ್ರಮುಖ ಕಮಾಂಡರ್ ಗಳನ್ನು ಹತ್ಯೆ ಮಾಡಲಾಗಿದೆ. ಅಲ್ಲದೆ ಇರಾನ್ ನ ವಿವಿ ಮತ್ತು ಜನ ವಸತಿ ಪ್ರದೇಶಗಳ ಮೇಲೆ ಭೀಕರ ಬಾಂಬ್ ದಾಳಿ ನಡೆಸಲಾಗಿದ್ದು ಮಕ್ಕಳು ಸೇರಿ 37 ಜನರು ಹತರಾಗಿದ್ದಾರೆ.
ಅಮೆರಿಕ ಅಧ್ಯಕ್ಷರು ನೀಡಿದ್ದ ಗಡುವು ಇಂದು ರಾತ್ರಿ ಮುಗಿಯಲಿದ್ದು, ಇರಾನ್ ಸ್ಪಷ್ಟ ತಿರಸ್ಕಾರದ ನಂತರ ಪರಿಸ್ಥಿತಿ ಉಲ್ಬಣಗೊಂಡಿದ್ದು ಯುದ್ಧ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ದಟ್ಟವಾಗಿದೆ.


