ಮುಂಬೈ : ʼಕಾಂತಾರʼ ಸಿನಿಮಾ ಬಂದ ಬಳಿಕ ತುಳುನಾಡಿನ ದೈವಗಳ ಮೇಲಿನ ನಂಬಿಕೆ ಎಲ್ಲೆಡೆ ಹಬ್ಬಿದೆ. ಆದರೆ ʼಕಾಂತಾರʼ ರಿಲೀಸ್ ಬಳಿಕ ದೈವಗಳ ವೇಷ -ಭೂಷಣ ತೊಟ್ಟು ದೈವಗಳ ಆರಾಧಕರ ಮನಸ್ಸಿಗೆ ಧಕ್ಕೆ ಆಗುವ ವಿಚಾರಗಳು ಕೂಡ ನಡೆಯುತ್ತಿದೆ.
ಕರಾವಳಿಯಲ್ಲಿ ದೈವಗಳ ಆರಾಧನೆ ಇತ್ತೀಚೆಗಿನ ವರ್ಷಗಳಲ್ಲಿ ಆಚರಿಸಿಕೊಂಡು ಬಂದಿರುವಂಥದ್ದಲ್ಲ, ಸಾವಿರಾರು ವರ್ಷಗಳಿಂದಲೂ ದೈವ -ದೇವರುಗಳ ಚಾಕರಿಯನ್ನು ಮಾಡುತ್ತಾ ಬಂದಿರುವ ಅನೇಕ ಕುಟುಂಬಗಳು ಕರಾವಳಿಯಲ್ಲಿವೆ.
ಮುಂಬೈಯಲ್ಲಿ ಗಣೇಶ್ ಚತುರ್ಥಿ ಹಬ್ಬಕ್ಕಾಗಿ ತಯಾರಾದ ಪಂಜುರ್ಲಿ ದೈವದ ಅವತಾರವುಳ್ಳ ಗಣೇಶನ ವಿಗ್ರಹವೊಂದರ ಫೋಟೋ ಹಾಗೂ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.

