ಮೂಡಿಗೆರೆ : ತಿಂಗಳ ಹಿಂದೆ ಚಾರ್ಮಾಡಿ ಘಾಟಿಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಇದೀಗ ಮತ್ತೆ ಪ್ರತ್ಯಕ್ಷಗೊಂಡಿದೆ. ರಾತ್ರಿ ಹೊತ್ತು ಘಾಟಿ ತಿರುವಿನಲ್ಲಿ ಕಾಣಿಸಿಕೊಂಡ ಕಾಡಾನೆಯನ್ನು ಕಂಡು ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಾಡಾನೆ ಬಿಂದಾಸ್ ಓಡಾಟ, ವಾಹನಗಳ ಸಮೀಪವೇ ಸಲಗದ ಓಡಾಟ, ಯಾರಿಗೂ ತೊಂದರೆ ಕೊಡದೆ ಓಡಾಡಿದ ಆನೆ, ಇದನ್ನು ಕಂಡು ವಾಹನಗಳನ್ನ ನಿಲ್ಲಿಸಿ ನಿಧಾನವಾಗಿ ಮುಂದೆ ಸಾಗಿದ ವಾಹನ ಸವಾರರು. ಕಳೆದ ಮೂರೂ ನಾಲ್ಕು ತಿಂಗಳಿಂದ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ನಿತ್ಯ ಪ್ರಯಾಣಿಕರಿಗೆ ಕಾಣಿಸಿಕೊಳ್ಳುತ್ತಿದ್ದ ಕಾಡಾನೆ ಇದೀಗ ಮತ್ತೆ ಪ್ರತ್ಯಕ್ಷಗೊಂಡಿದೆ.

