ಮಂಗಳೂರು : ಅಪ್ರಾಪ್ತ ಯುವತಿ ನಾಪತ್ತೆಯಾದ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪದವಿನಂಗಡಿ ನಿವಾಸಿ ಮಲ್ಲಿಕಾರ್ಜುನ ಎಂಬವರ ಪುತ್ರಿ ಶಿವಾನಿ (17) ನಾಪತ್ತೆಯಾದವರು.
ಶಿವಾನಿ ಸ.14 ರಂದು ಕಾಲೇಜಿಗೆ ಹೋಗಿ ಬರುವುದಾಗಿ ತಿಳಿಸಿದ್ದು, ಮರಳಿ ಬಾರದೆ ನಾಪತ್ತೆಯಾಗಿದ್ದು, ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾರಿಗಾದರೂ ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ಮಲ್ಲಿಕಾರ್ಜುನ (ತಂದೆ) ಸಂಪರ್ಕಿಸಬೇಕಾಗಿ ತಿಳಿಸಿದ್ದಾರೆ.

