ಉಡುಪಿ : ನಗರಸಭೆ ವ್ಯಾಪ್ತಿಯಲ್ಲಿ ಜನಿಸಿರುವ ಮಕ್ಕಳ ಮನೆಗೇ ಬರಲಿದೆ ಜನನ ಪ್ರಮಾಣ ಪತ್ರ. ಜೊತೆಗೆ ನಗರಸಭೆಯಿಂದ ಸಿಹಿತಿಂಡಿಯೂ ಇರಲಿದೆ.
ನಗರಸಭೆಯಲ್ಲಿ ಜನನ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ಪ್ರಯಾಸಪಡುವುದನ್ನು ಗಮನಿಸಿದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಜನರ ಕಷ್ಟ ಪರಿಹಾರಕ್ಕೆ ಇಂಥದ್ದೊಂದು ಹೊಸ ಹಾಗೂ ಮಾದರಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ನಗರದಲ್ಲಿ ಜನಿಸಿದ ಪ್ರತಿ ಮಗುವಿನ ಮನೆಗೆ ಜನನ ಪ್ರಮಾಣ ಪತ್ರವನ್ನು ಸ್ವೀಟ್ ಬಾಕ್ಸ್ ಹಾಗೂ ಮಗುವು ನಗರದ ಶ್ರೇಷ್ಠ ಪ್ರಜೆಯಾಗಿ ರೂಪುಗೊಳ್ಳಲಿ ಎಂಬ ಶುಭ ಸಂದೇಶದೊಂದಿಗೆ ತಲುಪಿಸಲು ಚಿಂತನೆ ನಡೆಸಲಾಗುತ್ತಿದೆ.

