ಸುಬ್ರಹ್ಮಣ್ಯ : ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಅಳಿಕೆ ಮೂಲದ ಇಸ್ಮಾಯಿಲ್ (57) ಬಂಧಿತ.
ಸುಬ್ರಮಣ್ಯ ಪೊಲೀಸ್ ಠಾಣಾ ಅ.ಕ್ರ ನಂ: 101/2014 ಕಲಂ: 9,31,39,(D),48(A),50,51,57 ವನ್ಯಜೀವಿ ಸಂರಕ್ಷಣಾ ಅಧಿನಿಯಮ ಹಾಗೂ24(C) ಕರ್ನಾಟಕ ಅರಣ್ಯ ಕಾಯ್ದೆ ಹಾಗೂ 25,27, ಶಸ್ತ್ರಾಸ್ತ್ರ ಕಾಯಿದೆ ಪ್ರಕರಣದ ಆರೋಪಿ ಇಸ್ಮಾಯಿಲ್ ಪ್ರಕರಣ ದಾಖಲಾದ ಬಳಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು 10 ವರ್ಷದಿಂದ ತಲೆಮರೆಸಿಕೊಂಡಿದ್ದು, ಆತನನ್ನು ಅ.15 ರಂದು ವಿಟ್ಲ ಪೇಟೆಯಲ್ಲಿ ಠಾಣಾ ಹೆಚ್.ಸಿ ಇಕ್ಬಾಲ್ ಮತ್ತು ಪಿಸಿ ಸಚಿನ್ ರವರು ದಸ್ತಗಿರಿ ಮಾಡಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಮತ್ತೊಂದು ಪ್ರಕರಣ :
ಬೆಳ್ತಂಗಡಿ : ಸುಮಾರು 20 ವರುಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಮೂಲದ ಅಬ್ದುಲ್ ರಹಿಮಾನ್ (50) ಬಂಧಿತ.
ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ 29/1998 ಕಲಂ : 279,304(a) ಐಪಿಸಿ ಪ್ರಕರಣದಲ್ಲಿ 6 ತಿಂಗಳು ಶಿಕ್ಷೆಗೊಳಪಟ್ಟು, ಸುಮಾರು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಬ್ದುಲ್ ರಹಿಮಾನ್ ಪುತ್ತೂರು ಎಂಬಾತನನ್ನು ಅ.14 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರಾದ ಬಿ ಜಿ ಸುಬ್ಬಾಪೂರ್ ಮಠ, ಉಪ ನೀರಿಕ್ಷಕರಾದ ಮುರಳೀಧರ್ ಮತ್ತು ಯಲ್ಲಪ್ಪ ರವರ ನಿರ್ದೇಶನದಲ್ಲಿ, ಪುತ್ತೂರು ನಗರ ಠಾಣಾ ಎ.ಎಸ್.ಐ ಪರಮೇಶ್ವರ್ ರವರ ಸಹಕಾರದಿಂದ, ಬೆಳ್ತಂಗಡಿ ಠಾಣಾ ಹೆಚ್ ಸಿ ವ್ರಷಭ ಮತ್ತು ಪಿಸಿ ಮುನಿಯ ನಾಯ್ಕ್, ರವರು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿರುತ್ತಾರೆ.

