ಶಿವಮೊಗ್ಗ: ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ನೆಪ ಹೇಳದೆ ಹಣ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ (ಬಿಎಸ್ವೈ) ಆಗ್ರಹಿಸಿದ್ದಾರೆ.
ಯೋಜನೆಯ ಬಾಂಡ್ ಅವಧಿ ಪೂರ್ಣಗೊಂಡಿದ್ದರು ಹಲವು ಫಲಾನುಭವಿಗಳಿಗೆ ಇನ್ನೂ ಅದರ ಮಾಹಿತಿಯೂ ತಲುಪಿಲ್ಲ. ಮಾಹಿತಿ ಇರುವವರನ್ನೂ ದಾಖಲೆ ಸಲ್ಲಿಸಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ (ಬಿಎಸ್ವೈ) ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಕಠಿಣ ತಾಂತ್ರಿಕ ಷರತ್ತುಗಳನ್ನು ವಿಧಿಸಿ ದಾಖಲೆ ನೀಡುವಂತೆ ಫಲಾನುಭವಿಗಳಿಗೆ ಇಲಾಖೆಯ ಮಖಾಂತರ ಹೇಳಿಸಿದೆ, ಇದರಿಂದಾಗಿ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಅರ್ಹ ನೆರವು ನೀಡಬೇಕು. ಈ ಯೋಜನೆಯನ್ನು ಮತ್ತೆ ಜಾರಿ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾಗ್ಯಲಕ್ಷ್ಮಿ ಬಾಂಡ್ ಪಡೆದ ಫಲಾನುಭವಿಗೆ 18 ವರ್ಷ ತುಂಬಿದರೂ ಅವರ ಬ್ಯಾಂಕ್ ಖಾತೆಗೆ ₹1 ಲಕ್ಷ ಜಮೆಯಾಗುತ್ತಿಲ್ಲ. ರಾಜ್ಯದಲ್ಲಿ 34.50 ಲಕ್ಷ ಭಾಗ್ಯಲಕ್ಷ್ಮಿ ಫಲಾನುಭವಿಗಳಿದ್ದಾರೆ. ಉನ್ನತ ವ್ಯಾಸಂಗ ಸೇರಿದಂತೆ ಇತರೆ ಕಾರ್ಯಗಳಿಗೆ ಈ ಹಣ ನೆರವಾಗುತ್ತದೆ. ಹಾಗಾಗಿ ತಂದೆ-ತಾಯಿ ಇಬ್ಬರೂ ಮೃತಪಟ್ಟ ಕುಟುಂಬಗಳ ಹೆಣ್ಣು ಮಕ್ಕಳ ಪರಿಸ್ಥಿತಿಯ ಸೂಕ್ಷ್ಮತೆ, ಸರ್ಕಾರ ಮಾನವೀಯತೆಯಿಂದ ಪರಿಗಣಿಸಲಿ.
ಆದರೆ ಇದರ ಅನುಷ್ಠಾನದ ವಿಚಾರದಲ್ಲಿ ಸರ್ಕಾರ ಮೀನ-ಮೇಷ ಎಣಿಸುತ್ತಿದೆ’ ಎಂದು ಅವರು ಬೇಸರ ವ್ಯಕ್ತ ಪಡಿಸಿದರು.
‘ರಾಜ್ಯದ ಬಡ ಹೆಣ್ಣುಮಕ್ಕಳ ಬಾಳಿಗೆ ಸಹಾಯಕವಾಗುವ ಉದ್ದೇಶದಿಂದ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದೆ. ಭಾಗ್ಯಲಕ್ಷ್ಮಿ ಬಾಂಡ್ ಪಡೆದ ಫಲಾನುಭವಿಗಳಿಗೆ ಸರ್ಕಾರವು ಯೋಜನೆಯ ಹಣ ಕೊಡಲಿ ಎಂದು ಆಗ್ರಹಿಸಿದ್ದಾರೆ.

