ಉಡುಪಿಯ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ನ ವಿರುದ್ಧ ಸಾಲದ ವಂಚನೆ ಆರೋಪ ಕೇಳಿಬಂದಿದೆ. 20 ಸಾವಿರ ರೂ. ಸಾಲ ಪಡೆದವರಿಂದ 2 ಲಕ್ಷ ರೂ ವರೆಗೆ ಬ್ಯಾಂಕ್ ಸಿಬ್ಬಂದಿಗಳು ವಸೂಲಿ ಮಾಡುತ್ತಿದ್ದಾರೆ ಎಂಬುದು ಆರೋಪವಾಗಿದೆ. ಸಂತ್ರಸ್ತರು ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮತ್ತು ಮಾಜಿ ಶಾಸಕ ರಘುಪತಿ ಭಟ್ ಅವರಲ್ಲಿ ಮನವಿ ಮಾಡಿದ್ದಾರೆ.
ಬ್ಯಾಂಕ್ನವರು ಆದಷ್ಟು ಬೇಗ ಸಾಲ ಕಟ್ಟುವಂತೆ ಹಿಂಸಿಸುತ್ತಿದ್ದಾರೆ ಇದರಿಂದ ತೊಂದರೆ ಅನುಭವಿಸುತ್ತಿರುವ ಸಾಲಗಾರರು ನಮಗೆ ನ್ಯಾಯ ನೀಡಿ ಇದರಿಂದ ಪಾರು ಮಾಡಿ ಎಂದು ಅಳಲು ತೊಡಿಕೊಂಡಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಮಾಜಿ ಶಾಸಕರಾದ ರಘುಪತಿ ಭಟ್ ರವರು ಸಾಮಾಜಿಕ ತಾಣದಲ್ಲಿ ಅಕ್ರೋಶವನ್ನು ಹೊರಹಾಕಿದ್ದಾರೆ.
ನನಗೆ ಸಂತ್ರಸ್ತ ಸಾಲಗಾರರು ಬ್ಯಾಂಕ್ ನಿಂದ ಆದ ಅವ್ಯವಹಾರದ ಕುರಿತು ನೀಡಿಡ ಮೂಲಗಳು ಮತ್ತು ಮಹಾಲಕ್ಷ್ಮೀ ಕೋ. ಆಪರೇಟಿವ್ ಲಿ. ಶಾಖೆಯ ನಡೆಡಿರುವ ಅವ್ಯವಹಾರದ ಬಗ್ಗೆ ವಿಚಾರಣಾಧಿಕಾರಿಗಳಾದ ಕೆ. ಎಸ್. ಜಗದೀಶ್ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಕರು ಉಡುಪಿ ಇವರು ನಡೆಸಿದ ವಿಚಾರಣೆಯು, ಶಾಖಾ ವ್ಯವಸ್ಥಾಪಕರಾದ ಸುಬ್ಬಣ್ಣ ಅವರು 1413 ಮಂದಿಗೆ ತಲಾ ಎರಡು ಲಕ್ಷದಂತೆ ಒಟ್ಟು 2826 ಕೋಟಿ ನೀಡಿ ಅವ್ಯವಹಾರ ನಡೆಸದ ಬಗ್ಗೆ ಬ್ಯಾಂಕ್ ಗೆ ದಿನಾಂಕ 10-7-2023 ರಂದು ನೋಟೀಸ್ ನೀಡಿರುವ ಪ್ರತಿಯನ್ನು ನೀಡಿದ್ದೇನೆ. ಈ ಬಗ್ಗೆ ಸರಿಯಾದ ತನಿಖೆ ನಡೆಸಿ ಆದ ವ್ಯತ್ಯಾಸವನ್ನು ಸರಿಪಡಿಸಿ ಸಾಲ ಪಡೆಯದ ಗ್ರಾಹಕರನ್ನು ಋಣ ಮುಕ್ತ ಗೊಳಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಾಜಿ ಶಾಸಕರು ಬ್ಯಾಂಕ್ ಅವ್ಯವಹಾರ ಬಗ್ಗೆ ಧ್ವನಿ ಎತ್ತಿದ್ದೆ ತಡ, ಈ ಆರೋಪ – ಪ್ರತ್ಯಾರೋಪ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಆಣೆ ಪ್ರಮಾಣದ ಹಂತಕ್ಕೆ ಬಂದು ನಿಂತಿದೆ.
ಮಹಾಲಕ್ಷ್ಮಿ ಬ್ಯಾಂಕ್ನ ವ್ಯವಸ್ಥಾಪನ ನಿರ್ದೇಶಕರು, ಮಾಜಿ ಶಾಸಕ ರಘುಪತಿ ಭಟ್ಗೆ ದೇವರ ಕ್ಷೇತ್ರದಲ್ಲಿ ಆಣೆ ಪ್ರಮಾಣಕ್ಕೆ ಬರುವಂತೆ ಸವಾಲ್ ಹಾಕಿದ್ದಾರೆ. ಇದನ್ನು ಸ್ವೀಕರಿಸಿದ ರಘುಪತಿ ಭಟ್ ದಿನ ನಿಗದಿಪಡಿಸಿ ಬರುತ್ತೇನೆ ಎಂದು ಒಂದಿಷ್ಟು ದಾಖಲೆಗಳನ್ನ ಮುಂದಿಟ್ಟು ತಮ್ಮ ಸೋಶಿಯಲ್ ಮೀಡಿಯಾದ ಮೂಲಕ ಬ್ಯಾಂಕ್ನವರ ಸವಾಲಿಗೆ ಉತ್ತರಿಸಿದ್ದಾರೆ.

