ಬೆಂಗಳೂರು : ನಿರ್ದೇಶಕ ಗುರುಪ್ರಸಾದ್ ಸಾವಿನ ನಂತರ ಅವರ ವೈಯಕ್ತಿಕ ಜೀವನದ ಹಲವಾರು ವಿಷಯಗಳು ಅವರ ಒಡನಾಡಿಗಳು ಹಂಚಿಕೊಳ್ಳುತ್ತಿದ್ದಾರೆ. ನಟ ಹಾಗೂ ಬಿಜೆಪಿ ಸಂಸದ ಜಗ್ಗೇಶ್ ಅವರು ಗುರುಪ್ರಸಾದ್ ರವರ ಕುರಿತು ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಹೇಳಿಕೆಗಳ ಬಗ್ಗೆ ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರು ತೀವ್ರ ಅಕ್ರೋಶ ಹೊರ ಹಾಕಿದ್ದಾರೆ.
ಗುರುಪ್ರಸಾದ್ ರವರ ಜೀವನದ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿರುವ ನಟ ಜಗ್ಗೇಶ್ ಗೆ ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರು ಏಕವಚನದಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.
ಸತ್ತ ವ್ಯಕ್ತಿಯೊಬ್ಬರ ಬಗ್ಗೆ ಅದೆಂಥಾ ವಿಶ್ಲೇಷಣೆ ನಿಮ್ಮದು ಜಗ್ಗೇಶ್… ನಿಮ್ಮ ಸಂಸ್ಕೃತಿ ಹೀಗಿದೆಯಾ? ಇಲ್ಲವೇ ನಿಮ್ಮ ಮನಸ್ಸು ಅಷ್ಟು ವಿಕೃತವಾಗಿದಿಯೋ ಗೊತ್ತಿಲ್ಲ. ‘ಮಠ’ ಸಿನಿಮಾದಿಂದ ನಿಮಗೆ ಲೈಪ್ ಕೊಟ್ಟಿದ್ದು ಗುರು… . ಹೀಗಿರುವಾಗ ಅವರಿಗೆ ಕೆರೆತ ಇತ್ತು, ರಕ್ತ ಬರುತ್ತಿತ್ತು ಅಂತೆಲ್ಲ ಅವರ ಬಗ್ಗೆ ಹೇಗೆ ಮಾತನಾಡಿದ್ದೀರಿ. ಗುರುಪ್ರಸಾದ್ ಅವರ ಬಗ್ಗೆ ಹೀಗೆ ಮಾತನಾಡಿದ ನಿಮ್ಮನ್ನು ಮನುಷ್ಯ ಎಂದು ಹೇಗೇ ಕರೆಯಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಲಾಯರ್ ಜಗದೀಶ್, ನಟ ಜಗ್ಗೇಶ್ ಹೇಳಿಕೆ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ನಟ ಜಗ್ಗೇಶ್ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬ ವ್ಯಕ್ತಿ ಬದುಕಿದ್ದಾಗ ಆತನ ಬಗ್ಗೆ ಏನು ಹೇಳಿದರು ಅದಕ್ಕೆ ಪ್ರತಿಕ್ರಿಯಿಸಲು ಅವರು ಇರುತ್ತಾರೆ. ಆದರೆ ಒಬ್ಬ ವ್ಯಕ್ತಿ ಸತ್ತಮೇಲೆ ಅವರ ಬಗ್ಗೆ ಒಳಿತನ್ನೇ ಹೇಳಬೇಕು ಎಂಬ ಮಾತಿದೆ. ಹಾಗಾಗಿ ನಟ ಜಗ್ಗೇಶ್ ಅವರ ಹೇಳಿಕೆಗಳನ್ನು ಲಾಯರ್ ಜಗದೀಶ್ ಅವರು ಬಹಿರಂಗವಾಗಿ ಖಂಡಿಸಿದ್ದಾರೆ. ಹೀಗೆ ಬೇಸರ ಹೊರ ಹಾಕಿರುವ ಜಗದೀಶ್ ರವರ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

