ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರು 2017 ರಲ್ಲಿ ಮೊದಲ ಬಾರಿಗೆ ಅಮೆರಿಕದ ಪ್ರೆಸಿಡೆಂಟ್ ಆಗಿ ಆಯ್ಕೆಯಾಗಿದ್ದರು.
ಈಗ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ರವರ ಒಟ್ಟು ಆದಾಯ, ಆಸ್ತಿ ಎಷ್ಟು ಗೊತ್ತಾ? ಮೊದಲ ಬಾರಿ ಅಧ್ಯಕ್ಷರಾಗಿದ್ದ ಮತ್ತು ಈಗ ಆಸ್ತಿಯಲ್ಲಾಗಿರುವ ಒಟ್ಟು ವ್ಯತ್ಯಾಸ ಎಷ್ಟು ಗೊತ್ತಾ? ತಿಳಿಯೋಣ ಬನ್ನಿ
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೋಲಿಸಿ ಡೊನಾಲ್ಡ್ ಟ್ರಂಪ್ ಗೆದ್ದು ಬೀಗಿದ್ದಾರೆ.
ಟ್ರಂಪ್ ರವರು ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾದಾಗ ಹೆಚ್ಚಿನ ಜನರಿಗೆ ಅಚ್ಚರಿ ಉಂಟಾಗಿತ್ತು. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ, ಅಪ್ಪಟ ಬಿಸಿನೆಸ್ ಹಿನ್ನೆಲೆ ಇರುವ ವ್ಯಕ್ತಿಯೊಬ್ಬರು ಹೇಗೆ ಅಮೆರಿಕದ ಚುಕ್ಕಾಣಿ ಹಿಡಿಯಬಹುದೆಂದು.
ಟ್ರಂಪ್ ಅವರ ತಂದೆ ಫ್ರೆಡ್ ಟ್ರಂಪ್ ಅವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರಿಂದ, ಅಪ್ಪನಿಂದ ಇವರು ರಿಯಲ್ ಎಸ್ಟೇಟ್ ವ್ಯವಹಾರವನ್ನು ಬಳುವಳಿಯಾಗಿ ಪಡೆದುಕೊಂಡಿದ್ದರು.
ಫೋರ್ಬ್ಸ್ ಸಮಿಕ್ಷೆಯ ಪ್ರಕಾರ ಡೊನಾಲ್ಡ್ ಟ್ರಂಪ್ ಅವರ ನಿವ್ವಳ ಆಸ್ತಿಯ ಮೌಲ್ಯವು 6.6 ಬಿಲಿಯನ್ ಡಾಲರ್ ಗಳಷ್ಟಾಗಿದೆ. ಅಂದರೆ ಸುಮಾರು 55,000 ಕೋಟಿ ರೂ ಎನ್ನಬಹುದು.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ನ ಪ್ರಕಾರ ಟ್ರಂಪ್ ಅವರ ಆಸ್ತಿಯ ಮೌಲ್ಯವು 7.7 ಬಿಲಿಯನ್ ಡಾಲರ್.
ಅಮೆರಿಕದ ವಿವಿಧೆಡೆ ಇರುವ ಹಲವು ಹೋಟೆಲ್ಗಳು, ಲಕ್ಷುರಿ ವಸತಿಗಳು, ಗೋಲ್ಫ್ ಕೋರ್ಸ್ಗಳು, ಮನ್ಹಾಟ್ಟನ್ನಲ್ಲಿರುವ ಟ್ರಂಪ್ ಟವರ್, ಫ್ಲೋರಿಡಾದಲ್ಲಿರುವ ಮಾರಾ ಲಾಗೋ ಎಸ್ಟೇಟ್, ಹಲವು ಪ್ರತಿಷ್ಠಿತ ಪ್ರಾಪರ್ಟಿಗಳಲ್ಲಿ ಟ್ರಂಪ್ ಅವರ ಹೂಡಿಕೆ, ಟ್ರೂತ್ ಸೋಷಿಯಲ್ ಎಂಬ ಹೊಸ ಬ್ರ್ಯಾಂಡ್ ಸೋಷಿಯಲ್ ಮೀಡಿಯಾದ ಮಾಲೀಕರು ಆಗಿದ್ದಾರೆ.
ಕ್ರಿಪ್ಟೋಕರೆನ್ಸಿಯಲ್ಲಿ 1 ಮಿಲಿಯನ್ ಡಾಲರ್ ನ ಹೂಡಿಕೆಯನ್ನು ಮಾಡಿದ್ದಾರೆ. ಎನ್ಎಫ್ಟಿ ಟೋಕನ್ಗಳ ಮೂಲಕ ಆದಾಯವನ್ನು ಗಳಿಸಿದ್ದಾರೆ. ಕೆಲವೊಂದು ವಸ್ತುಗಳ ಪ್ರಚಾರಕ್ಕೆ ತಮ್ಮ ಹೆಸರನ್ನು ಬಳಸಿಕೊಳ್ಳುವ ಲೈಸೆನ್ಸ್ ಕೊಡುವ ಮೂಲಕ ಒಂದಷ್ಟು ಆದಾಯ ಗಳಿಸಿದ್ದಾರೆ. ಈ ಬ್ರ್ಯಾಂಡಿಂಗ್ನಿಂದ 3 ಲಕ್ಷ ಡಾಲರ್ ಗಳನ್ನು ಗಳಿಸಿದ್ದಾರೆ.
ಆರ್ಟ್ ಆಫ್ ಡೀಲ್ ಎಂಬ ಪುಸ್ತಕ ಬರೆದಿದ್ದು ಅದರ ರಾಯಲ್ಟಿಯಿಂದಲೂ ಆದಾಯ ಗಳಿಸುತ್ತಾರೆ. ಲೆಟರ್ಸ್ ಟು ಟ್ರಂಪ್ ಎನ್ನುವ ಪುಸ್ತಕದ ಮಾರಾಟದಿಂದಲೇ ಟ್ರಂಪ್ 45 ಲಕ್ಷ ಡಾಲರ್ ಗಳನ್ನು ಗಳಿಸಿದ್ದಾರೆ.

