ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನವು ಒಂದೊಂದು ಟಾಸ್ಕ್ ನೀಡಲಾಗುತ್ತದೆ, ಆ ಟಾಸ್ಕ್ ಆಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಆಡುವ ಸಂಧರ್ಭದಲ್ಲಿ, ಗೋಲ್ಡ್ ಸುರೇಶ್ ಅವರ ಕಾಲ ಮೇಲೆ ಆ ಡ್ರಮ್ ಬಿದ್ದು ಗಾಯವಾಗಿದೆ.. ತಕ್ಷಣವೇ ಅವರು ‘ನನ್ನ ಕಾಲು ಮುರಿದೇ ಹೋಯ್ತು’ ಎಂದು ಗೋಳಾಡಿಕೊಂಡಿದ್ದಾರೆ.
ಬಿಗ್ ಬಾಸ್ ನ ಟಾಸ್ಕ್ ಒಂದರಲ್ಲಿ ಮನೆಯ ಸದಸ್ಯರನ್ನು ನಾಲ್ಕು ತಂಡಗಳನ್ನಾಗಿ ಮಾಡಿತ್ತು ಮತ್ತು ಪ್ರತಿ ತಂಡಕ್ಕೆ ಒಂದು ಡ್ರಮ್ ನೀಡಿ ಅದರಲ್ಲಿರುವ ನೀರು ಹೊರ ಹೋಗದಂತೆ ನೋಡಿಕೊಳ್ಳಬೇಕು.
ಆಡುವ ಸಂಧರ್ಭದಲ್ಲಿ, ಗೋಲ್ಡ್ ಸುರೇಶ್ ಅವರ ಕಾಲ ಮೇಲೆ ಆ ಡ್ರಮ್ ಬಿದ್ದು ಗಾಯವಾಗಿದೆ.. ತಕ್ಷಣವೇ ಅವರು ‘ನನ್ನ ಕಾಲು ಮುರಿದೇ ಹೋಯ್ತು’ ಎಂದು ಗೋಳಾಡಿಕೊಂಡಿದ್ದಾರೆ. ತಕ್ಷಣವೆ ಬೇರೆ ಸ್ಪರ್ಧಿಗಳು ಸುರೇಶ್ ಅವರ ಕಾಲನ್ನು ನೇರ ಮಾಡಲು ಪ್ರಯತ್ನಿಸಿದಾಗ ಇದಕ್ಕೆ ಅವಕಾಶ ಕೊಡದ ಸುರೇಶ್ ಅವರು ಮತ್ತಷ್ಟು ನೋವಿನಿಂದ ನರಳಿದ್ದಾರೆ. ನಂತರ ಅವರನ್ನು ಕನ್ಫೆಷನ್ ರೂಮ್ ಗೆ ಕರೆದೊಯ್ಯಲಾಯಿತು, ಅಲ್ಲಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂಬ ಮಾಹಿತಿ ಇದೆ. ವೈದ್ಯರಿಂದ ಗಂಭೀರ ಪೆಟ್ಟುಗಳಾಗಿಲ್ಲ ಎಂಬ ಮಾಹಿತಿ ಬಂದಿದೆ.
ಕಾಲು ಮುರಿದು ಹೋದರೆ ಸುರೇಶ್ ಅವರು ಬಿಗ್ ಬಾಸ್ನಿಂದ ಹೊರ ಹೋಗಬೇಕಾಗುತ್ತದೆ ಎಂಬ ಆತಂಕದಲ್ಲಿದ್ದ ಬಿಗ್ ಮಂದಿಗೆ ಸುರೇಶ್ ಗೆ ಗಂಭೀರ ಗಾಯಗಳಾಗಿಲ್ಲ ಎಂಬ ವೈದ್ಯರು ಹೇಳಿದ ಮಾಹಿತಿ ಬಿಗ್ ಬಾಸ್ ಕಡೆಯಿಂದ ಕೇಳಿ ಸಂತೋಷಗೊಂಡಿದ್ದಾರೆ.

