ದ.ಕ : ಗುರುಪುರದ ಸೇತುವೆಯ ಮೇಲಿಂದ ವ್ಯಕ್ತಿಯೊಬ್ಬ ತನ್ನ 2 ವರ್ಷದ ಮಗುವಿನೊಂದಿಗೆ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನ.10 ರಂದು ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿಯು ಕೈಕಂಬದ ನಿವಾಸಿಯಾಗಿರು ಸಂದೀಪ್ ಎಂದು ತಿಳಿದು ಬಂದಿದೆ.
ಕೌಟುಂಬಿಕ ಕಲಹದ ಕಾರಣದಿಂದ 2 ವರ್ಷದ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ತಿಳಿದುಬಂದಿದೆ. ಸಂದೀಪ್ ಆತ್ಮಹತ್ಯೆಗೆ ಯತ್ನಿಸಿದಾಗ ಇದನ್ನು ಗಮನಿಸಿದ ಕೆಲ ಮುಸ್ಲಿಂ ಯುವಕರು ಆತನನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಅದು ಸಾಧ್ಯವಾಗದೆ ಇದಾಗ, ಅವನು ನದಿಗೆ ಹಾರಿದ್ದೇ ಆದಲ್ಲಿ ಅವನನ್ನು ರಕ್ಷಣೆ ಮಾಡಲು ಕೆಲ ಯುವಕರು ಸಿದ್ದರಾಗಿ ನಿಂತಿದ್ದಾರೆ.
ನದಿಗೆ ಹಾರಲು ಯತ್ನಿಸಿದಾತ ಸಂದೀಪ್ ಆಯತಪ್ಪಿ ಸೇತುವೆಯ ಮೇಲೆ ಬಿದ್ದಿದ್ದಾನೆ. ತಕ್ಷಣವೇ ಆತನನ್ನು, ಮಗುವನ್ನು ರಕ್ಷಣೆ ಮಾಡಿದ ಯುವಕರು ಆತ್ಮಹತ್ಯೆ ಮಾಡಲು ಮುಂದಾದಕ್ಕಾಗಿ ಆತನಿಗೆ ಎರಡೇಟು ನೀಡಿ ಬುದ್ದಿ ಕಲಿಸಿದ್ದಾರೆ.
ಸ್ಥಳಕ್ಕೆ ಬಜ್ಪೆ ಠಾಣೆಯ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

