ಮಂಗಳೂರು : 2019 ರ, ಒಂದು ನಿಮಿಷದಲ್ಲಿ ದಾಖಲೆಯ ರೈಮ್ಸ್ ಆಟವಾಡಿ ಇಂಡಿಯನ್ ಬುಕ್ ಆಫ್ ರೆಕಾಡ್ಸ್ನಲ್ಲಿ ಸೆರ್ಪಡೆಯಾಗಿದ್ದ ಪೂರ್ವಿ ,ಅನಾರೋಗ್ಯ ಕಾರಣದಿಂದ ಮಂಗಳೂರಿನಲ್ಲಿ ಆಕಾಲಿಕ ನಿಧನ ಹೊಂದಿದ್ದಾಳೆ.
ಮಂಗಳೂರಿನ, ದ್ವಾರಕ ನಗರ ಕೊಟ್ಟಾರದ ನಿವಾಸಿಗಳಾದ ಪುಷ್ಪರಾಜ್ ಎಸ್. ಕುಂದರ್ ಮತ್ತು ವೈಶಾಲಿ ಎಲ್. ಬೆಂಗ್ರೆ ದಂಪತಿಗಳ ಪುತ್ರಿ ಪೂರ್ವಿ( 7) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಗ್ರೀನ್ ವುಡ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಲಿಯುತ್ತಿದ್ದ ಈ ಮಗು ಸಣ್ಣ ಪ್ರಾಯದಲ್ಲಿಯೆ ಫುಟ್ಬಾಲ್, ಭರತನಾಟ್ಯದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿ ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದಳು. ವಿವಿಧ ಸಂಘ ಸಂಸ್ಥೆಯಿಂದಲೂ ಸಮ್ಮಾನ ಪಡೆದುಕೊಂಡಿದ್ದಳು.
ಪೂರ್ವಿಯ ಆಕಾಲಿಕ ಮರಣಕ್ಕೆ ಬೆಂಗ್ರೆ ವಿದ್ಯಾರ್ಥಿ ಸಂಘ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಶೋಕ ವ್ಯಕ್ತಪಡಿಸಿರುತ್ತಾರೆ.

