ಹಿರಿಯಡಕ : ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಹಿರಿಯಡಕ ಕುದಿ ಗ್ರಾಮದ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಕುದಿ ವಸಂತ ಶೆಟ್ಟಿ ಸೋಮವಾರ (ನ.11)ರಂದು ಅಲ್ಪಕಾಲದ ಅಸೌಖ್ಯದಿಂದ ಮೃತಪಟ್ಟಿದ್ದಾರೆ.
ತನ್ನೂರಿನಲ್ಲಿ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆಯನ್ನು 1980 ರಲ್ಲಿ ಸ್ಥಾಪಿಸಿ, ಸ್ಥಾಪಕ ಮುಖ್ಯ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಇವರು ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ 4 ವರ್ಷ, ಅಧ್ಯಕ್ಷರಾಗಿ 5 ವರ್ಷ ಸೇವೆ ಸಲ್ಲಿಸಿದ್ದಾರೆ.
ತುಳು ಭಾಷೆ, ಸಂಸ್ಕೃತಿ ಉಳಿಸುವಲ್ಲಿ ತುಳು ಚಾವಡಿಯ ಪ್ರಧಾನ ಸಂಪನ್ಮೂಲ ಉಪನ್ಯಾಸಕರಾಗಿ, ಉತ್ತಮ ವಾಗ್ಮಿಯಾಗಿಯು ಗುರುತಿಸಿಕೊಂಡವರು. ತನ್ನ ಊರಿನ ದೈವಸ್ಥಾನಗಳ ಸಮಿತಿಯಲ್ಲಿಯು ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.

