ಕಳೆದ ಲೋಕಸಭಾ ಚುನಾವಣೆಯ ಸಂದರ್ಭ ಲಗ್ನ ಪತ್ರಿಕೆಯಲ್ಲಿ ಪ್ರಧಾನಿ ಮೋದಿ ಪರ ಮತ ಯಾಚನೆ ಮಾಡಿದ್ದ ಸಂಬಂಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಗ್ರಾಮದ ಮದುಮಗ ಶಿವಪ್ರಸಾದ್ ವಿರುದ್ಧ ಹಾಕಲಾದ ಕೇಸ್ ಗೆ ಹೈಕೋರ್ಟ್ ಸೋಮವಾರ ತಡೆ ನೀಡಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ದೂರು ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣೆ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ಶಿವಪ್ರಸಾದ್ ಸಲ್ಲಿಸಿದ ಅರ್ಜಿ ವಿಚಾರಿಸಿದ ನ್ಯಾಯ ಪೀಠ, ಚುನಾವಣೆ ನೀತಿ ಸಂಹಿತ ಜಾರಿಗೆ ಬರುವ ಮುನ್ನವೇ ಲಗ್ನ ಪತ್ರಿಕೆ ಮುದ್ರಣವಾಗಿದೆ ಎಂದು ಮದುಮಗ ಶಿವಪ್ರಸಾದ್ ವಿರುದ್ಧ ಹಾಕಲಾದ ಕೇಸ್ ಗೆ ಹೈಕೋರ್ಟ್ ಸೋಮವಾರ ತಡೆ ನೀಡಿದೆ.
ಅರ್ಜಿದಾರರ ಪರ ವಾದಮಂಡಿಸಿದ ವಕೀಲ ಎಂ.ವಿನೋದ್ ಕುಮಾರ್ ರವರು ಅರ್ಜಿದಾರರ ವಿರುದ್ದ ಹಾಕಲಾಗಿರುವ ಕೇಸ್ ಅನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.

