ತುಳಸಿ ವಿವಾಹ/ಪೂಜೆಯನ್ನು ದೇವೋತ್ಥಾನ ಏಕಾದಶಿಯ ಮರುದಿನದಂದು ಅಂದರೆ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ ತುಳಸಿ ವಿವಾಹದ ಮಹತ್ವ : ಪೌರಾಣಿಕ ಕಥೆಗಳ ಪ್ರಕಾರ, ಒಂದು ಕಾಲದಲ್ಲಿ ಜಲಂಧರನೆಂಬ ರಾಕ್ಷಸ ಮೂರು ಲೋಕಗಳಲ್ಲಿ ಭಯವನ್ನು ಸೃಷ್ಟಿಸಿದ್ದನು. ಅವನ ಪತ್ನಿ ವಿಷ್ಣುವಿನ ಮಹಾನ್ ಭಕ್ತೆಯಾಗಿದ್ದಳು. ಪತಿವೃತೆಯಾದ ಮತ್ತು ಮಹಾನ್ ತಪಸ್ಸಿಯಾದ ಆಕೆಯ ಗಂಡನಾದ ಜಲಂಧರನನ್ನು ಸೋಲಿಸುವುದು ವಿಷ್ಣುಗೆ ಅಸಾಧ್ಯವಾಗಿತ್ತು.
ಆದರೆ ವಿಷ್ಣುವು ಜಲಂಧರನ ರೂಪವನ್ನು ತೆಗೆದುಕೊಂಡು ವೃಂದಾಳ ಪತಿವೃತೆಯನ್ನು ಮುರಿದು ಜಲಂಧರನನ್ನು ಕೊಂದನು. ಇದರಿಂದ ಕೋಪಗೊಂಡ ವೃಂದಾ ಭಗವಾನ್ ವಿಷ್ಣುವನ್ನು ಕಲ್ಲಾಗುವಂತೆ ಶಪಿಸಿದಳು. ವಿಷ್ಣುವಿನ ಈ ರೂಪವನ್ನು ‘ಸಾಲಿಗ್ರಾಮ’ ಎಂದು ಕರೆಯಲಾಗುತ್ತದೆ.
ವೃಂದಾ ತನ್ನನ್ನು ತಾನೇ ಆತ್ಮಾಹುತಿ ಮಾಡಿಕೊಂಡ ಜಾಗದಲ್ಲಿ ತುಳಸಿ ಗಿಡ ಬೆಳೆಯತೊಡಗಿತು. ವಿಷ್ಣುವು ತುಳಸಿಯನ್ನು ತನ್ನ ಸಾಲಿಗ್ರಾಮ್ ರೂಪದೊಂದಿಗೆ ಮದುವೆಯಾಗುವುದಾಗಿಯೂ, ತುಳಸಿಯಿಲ್ಲದೆ ಅವನ ಪೂಜೆಯು ಅಪೂರ್ಣವಾಗುವುದೆಂದು ವರವನ್ನು ನೀಡಿದನು. ಆದ್ದರಿಂದ ದೇವೋತ್ಥಾನ ಏಕಾದಶಿಯ ಮರುದಿನದಂದು ತುಳಸಿಯನ್ನು ಮದುವೆಯಾಗುತ್ತಾನೆ ಮತ್ತು ಈ ಕಾರಣದಿಂದಾಗಿ ತುಳಸಿ ಎಲೆಗಳನ್ನು ವಿಷ್ಣು ಪೂಜೆಯಲ್ಲಿ ಬಳಸಲಾಗುತ್ತದೆ.
ಸನಾತನ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಶುಕ್ಲ ಪಕ್ಷವು ಮಂಗಳವಾರದ, ನವೆಂಬರ್ 12ರ ಸಂಜೆ 4:02 ಕ್ಕೆ ಪ್ರಾರಂಭವಾಗಿ ಬುಧವಾರ, ನವೆಂಬರ್ 13, 2024 ರ ಮಧ್ಯಾಹ್ನ 1:01 ಕ್ಕೆ ಕೊನೆಗೊಳ್ಳುತ್ತದೆ.
ತುಳಸಿ ವಿವಾಹಕ್ಕೆ ಶುಭ ಸಮಯ ಸಂಜೆ 5:29 ರಿಂದ 7:53 ರವರೆಗೆ, ಈ ಸಮಯದಲ್ಲಿ ತುಳಸಿ ಭಗವಾನ್ ವಿಷ್ಣುವಿನ ರೂಪದಲ್ಲಿರುವ ಸಾಲಿಗ್ರಾಮವನ್ನು ಮದುವೆಯಾಗುತ್ತಾಳೆ ಎಂಬುದು ನಂಬಿಕೆ.

