ಕಾರ್ಕಳ : ರಾಜ್ಯಮಟ್ಟದ ಕಬಡ್ಡಿ ಆಟಗಾರ ಆಗಿರುವ ಮುಟ್ಲುಪಾಡಿಯ ನಡುಮನೆ ನಿವಾಸಿಯಾಗಿರುವ ಪ್ರೀತಂ ಶೆಟ್ಟಿ(26) ಅವರು ಶುಕ್ರವಾರ(ಡಿ.13)ದ ತಡರಾತ್ರಿ ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಪ್ರೀತಂ ಅವರು ಶುಕ್ರವಾರದಂದು ಮಂಡ್ಯಾದಲ್ಲಿ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದು ಆಡುತ್ತಿರುವಾಗಲೇ ಎದೆ ನೋವು ಕಾಣಿಸಿಕೊಂಡಿದೆ, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಮೃತರು ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.

