ಬಂಟ್ವಾಳ : ಬಡಗಬೆಳ್ಳೂರು ನಿಶಾಂತ್ ಎಂಬವರ ಮನೆಯಲ್ಲಿ ಅಕ್ರಮವಾಗಿ ಜುಗಾರಿ ಆಡುತ್ತಿದ್ದ ವೇಳೆ ಬಂಟ್ವಾಳ ಡಿವೈಎಸ್ಪಿ ವಿಜಯ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಒಟ್ಟು 33 ಜನರನ್ನು ಹಾಗೂ 7,81,420/- ನಗದನ್ನು ವಶಪಡಿಸಿಕೊಂಡ ಘಟನೆಯು ಡಿ.17 ಮುಂಜಾನೆ ನಡೆದಿದೆ. “ಉಲಾಯಿ-ಪಿದಾಯಿ” ಜುಗಾರಿ ಆಟ ಆಡಿಸುತ್ತಿದ್ದ ಮನೆ ಮಾಲೀಕ ಆರೋಪಿ ನಿಶಾಂತ್ ಪರಾರಿಯಾಗಿದ್ದಾನೆ.
ಬಂಧಿತ ಆರೋಪಿಗಳು : ರಾಜೇಶ್ (35 ವರ್ಷ), ಅನಿಲ್ ಕುಮಾರ್ (30 ವರ್ಷ), ನಿತೀಶ್ (21 ವರ್ಷ), ಸತೀಶ್ (36 ವರ್ಷ), ಮುಸ್ತಾಫ ಕೆ.ಪಿ. (33 ವರ್ಷ), ಅರುಣ್ ಡಿ.ಸೋಜ (50 ವರ್ಷ), ರೋಹಿತಾಶ್ವ ಪೂಜಾರಿ (46 ವರ್ಷ), ವಿಜೇತ್ ಕುಮಾರ್ (39 ವರ್ಷ), ನಿಖಿಲ್ (34 ವರ್ಷ), ಆನಂದ ಡಿ.ಸೋಜ (46 ವರ್ಷ), ಚೇತನ್ (39 ವರ್ಷ), ನಿತಿನ್ (34 ವರ್ಷ), ಪುಷ್ಪರಾಜ್ ಬಳ್ಳಾಲ್ (52 ವರ್ಷ) ನೌಷಾದ್ (37 ವರ್ಷ), ನಾಗೇಶ್ (36 ವರ್ಷ), ಅಬ್ದುಲ್ ಮಜೀದ್ (37 ವರ್ಷ), ಹರೀಶ್ (45 ವರ್ಷ), ಉಮೇಶ್ (52 ವರ್ಷ), ವಿನಾಯಕ (47 ವರ್ಷ), ಅಜಿತ್ ಕುಮಾರ್ (36 ವರ್ಷ), ರಾಘವೇಂದ್ರ (34 ವರ್ಷ), ಪ್ರವೀಣ್ ಕುಮಾರ್ (58 ವರ್ಷ), ಚೆನ್ನಕೇಶವ (42 ವರ್ಷ), ಭಾಸ್ಕರ (36 ವರ್ಷ), ವಿಘ್ನೇಶ (42 ವರ್ಷ), ಸಂಕೇತ್ (35 ವರ್ಷ), ಪವನ್ ರಾಜ್ (37 ವರ್ಷ), ಲೋಹಿತ್ (42 ವರ್ಷ), ಸತೀಶ್ ಇ., ಧೀರಜ್ ಕುಮಾರ್ (28 ವರ್ಷ), ಚಿದಾನಂದ (30 ವರ್ಷ), ಪ್ರಸಾದ್ (37 ವರ್ಷ), ಸಂದೀಪ್ (34 ವರ್ಷ), ನಿಶಾಂತ್ ಪರಾರಿಯಾದ ವ್ಯಕ್ತಿ.
ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯವು ರೂ.7,90,220/- ಆಗಿರುತ್ತದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಈ ಕಾರ್ಯಚರಣೆಯಲ್ಲಿ ಬಂಟ್ವಾಳ ಡಿವೈಎಸ್ಪಿ ವಿಜಯ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ, ಸಬ್ ಇನ್ಸ್ಪೆಕ್ಟರ್ ಹರೀಶ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.

