ಮಣಿಪಾಲ: ಹೆರ್ಗ ಗ್ರಾಮದ ಶೆಟ್ಟಿಬೆಟ್ಟು ಹೊಳೆಬಾಗಿಲು ಎಂಬಲ್ಲಿ ಸ್ವರ್ಣಾ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ 2 ಯುನಿಟ್ ಮರಳು ಸಹಿತ ಸಾಗಾಟಕ್ಕೆ ಬಳಸಿದ ಲಾರಿ ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮರಳು ಸಂಗ್ರಹಿಸುತ್ತಿದ್ದ ಮೂರ್ನಾಲ್ಕು ಮಂದಿ ಪೊಲೀಸರನ್ನು ಕಂಡೊಡನೆ ಪಕ್ಕದ ಕಾಡಿನೊಳಗೆ ಓಡಿ ಹೋಗಿ ಪರಾರಿಯಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




