ಮೇಷ: ವಿಶ್ರಾಂತಿ ತೆಗೆದುಕೊಳ್ಳಿ. ಆದಾಯದ ಹೊಸ ಮೂಲಗಳು ಕಂಡುಬರುತ್ತದೆ. ನಿಮ್ಮ ಸೃಜನಶೀಲ ಸಾಮರ್ಥ್ಯ ಮೆಚ್ಚುಗೆ ತರುತ್ತದೆ.
ವೃಷಭ: ಯೋಗ, ಧ್ಯಾನದೊಂದಿಗೆ ದಿನ ಆರಂಭಿಸಿ. ಇತರರ ಮೇಲೆ ಪ್ರಭಾವ ಬೀರಲು ಹೆಚ್ಚು ಖರ್ಚು ಮಾಡಬೇಡಿ. ಕೆಲಸದ ಒತ್ತಡ ಮನಸ್ಸನ್ನು ಆವರಿಸುತ್ತದೆ.
ಮಿಥುನ: ಆರಾಮವಾಗಿರುವ ಭಾವನೆ ಹೊಂದಿರುತ್ತೀರಿ. ಹಳೆಯ ಸಂಪರ್ಕ ಕೆಲವು ಸಮಸ್ಯೆ ಸೃಷ್ಟಿಸಬಹುದು. ಪ್ರೀತಿಯಲ್ಲಿ ದೈರ್ಯ ಹೊಂದಿರಿ.
ಕರ್ಕಾಟಕ: ನೀವು ಭರವಸೆಯ ಮಾಯಾಜಾಲದಲ್ಲಿದ್ದೀರಿ. ಯೋಚಿಸಿ ಹಣದ ಹೂಡಿಕೆ ಮಾಡುವ ಅಗತ್ಯವಿದೆ. ನಿಮ್ಮ ನಗು ಅತ್ಯುತ್ತಮ ಔಷಧ.
ಸಿಂಹ: ಸ್ನೇಹಿತರೊಂದಿಗೆ ಸಂಜೆ ಆಹ್ಲಾದಕರವಾಗಿರುತ್ತದೆ. ಕಾಳಜಿಯುಳ್ಳ ಸ್ನೇಹಿತರನ್ನು ಭೇಟಿ ಮಾಡುತ್ತೀರಿ. ಪುಸ್ತಕವನ್ನು ಓದಬಹುದು.
ಕನ್ಯಾ: ಒರಟು ವರ್ತನೆ ಸಂಬಂಧ ಹಾಳು ಮಾಡುತ್ತದೆ. ದೂರ ಹೋಗಿ ಮನಸ್ಥಿತಿಯನ್ನು ಬದಲಾಯಿಸಿ. ಧಾರ್ಮಿಕ ಕಾರ್ಯಗಳಿಗೆ ಉತ್ತಮ ದಿನ.
ತುಲಾ: ಮಕ್ಕಳೊಂದಿಗೆ ಆಟವಾಡುವುದು ಅದ್ಭುತ ಅನುಭವ. ಉತ್ತಮ ದಾಂಪತ್ಯ ಮನೆಯಲ್ಲಿ ಸಮೃದ್ಧಿ ತರುತ್ತದೆ. ಗಣನೀಯ ಪ್ರಮಾಣದ ಹಣ ಹೊಂದಿರುತ್ತೀರಿ.
ವೃಶ್ಚಿಕ: ಮನೆಯಲ್ಲಿ ಅಗತ್ಯ ವಸ್ತುಗಳ ಮೇಲೆ ಖರ್ಚು ಮಾಡುತ್ತೀರಿ. ಆರೋಗ್ಯದ ಬಗ್ಗೆ ಚಿಂತಿಸಬೇಡಿ. ನಿಮಗಾಗಿ ಸಮಯ ನೀಡುತ್ತೀರಿ.
ಧನಸ್ಸು: ಹಲ್ಲು ನೋವು ಸಮಸ್ಯೆ ಬರಬಹುದು. ಭೂಮಿ ಮಾರಾಟದಲ್ಲಿ ಅಧಿಕ ಹಣ ಗಳಿಸುತ್ತೀರಿ. ಪ್ರೀತಿಪಾತ್ರರೊಡನೆ ಪ್ರೀತಿ ಹಂಚಿಕೊಳ್ಳಿ.
ಮಕರ: ಆರೋಗ್ಯ ಚೆನ್ನಾಗಿರುತ್ತದೆ. ಹಣ ಕಳವಾಗುವ ಸಾಧ್ಯತೆ ಇದೆ. ನಿಮ್ಮ ಜೀವನ ಸಂಗಾತಿ ನೀವೆಂದುಕೊಂಡಂತೆ ಅದ್ಭುತವಾಗಿಲ್ಲ. ಕ್ರೀಡೆಯಲ್ಲಿ ಆಟವಾಡಿ ಚೈತನ್ಯ ಗಳಿಸುತ್ತೀರಿ
ಕುಂಭ: ಪ್ರಯಾಣ ಮಾಡುವ ಮನಸ್ಥಿತಿಯಲ್ಲಿರುತ್ತೀರಿ. ಅನಗತ್ಯ ಒತ್ತಡ ತಪ್ಪಿಸಿ. ವದಂತಿಗಳಿಂದ ದೂರವಿರಿ. ತಾಳ್ಮೆ ಕಳೆದುಕೊಳ್ಳಬೇಡಿ.
ಮೀನ: ನಿಮ್ಮಲ್ಲಿ ಇಂದು ಚುರುಕುತನ ಇರುತ್ತದೆ. ಆಪ್ತರಿಂದ ಸಲಹೆ ಪಡೆಯಬಹುದು. ಹೊಸ ವೆಚ್ಚಗಳನ್ನು ಮುಂದೂಡಿ. ಸಂಗಾತಿಯಿಂದ ವಿಶೇಷ ಗಮನ ಸೆಳೆಯುತ್ತೀರಿ.

