ಕುಂದಾಪುರ : ಮರವಂತೆ ಕಡಲ ತೀರದಲ್ಲಿ ಗಾಂಜಾ ಸೇವನೆ ಮಾಡಿದ ಇಬ್ಬರು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳನ್ನು ಶರ್ಪುದ್ದೀನ್ (22ವ), ಮಹಮ್ಮದ್ ಸುಹೇಬ್ (21ವ) ಎಂದು ಗುರುತಿಸಲಾಗಿದೆ.
ಗಂಗೊಳ್ಳಿ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಬಸವರಾಜ ಕನಶೆಟ್ಟಿ ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮರವಂತೆ ಬೀಚ್ ಬಳಿ ಇಬ್ಬರು ವ್ಯಕ್ತಿಗಳು ಗಾಂಜಾ ಸೇವಿಸುತ್ತಿರುವ ಕುರಿತು ಲಭಿಸಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಇಬ್ಬರೂ ವ್ಯಕ್ತಿಗಳು ತೊದಲುತ್ತಾ ಮಾತನಾಡುತ್ತಿದ್ದು, ಅಮಲಿನಲ್ಲಿರುವುದು ಕಂಡುಬಂದಿದೆ. ಅವರನ್ನು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

