ಮಂಗಳೂರು: ಉಳ್ಳಾಲ – ನೇತ್ರಾವತಿ ಡೌನ್ ಲೈನ್ (ನೇತ್ರಾವತಿ ರೈಲ್ವೇ ಸೇತುವೆ)ಯಲ್ಲಿ ಸುಮಾರು 25ರಿಂದ 30 ವರ್ಷ ಪ್ರಾಯದ ಅಪರಿಚಿತ ಯುವಕನ ಶವ ಪತ್ತೆಯಾಗಿದೆ.
ಸುಮಾರು 5.7 ಅಡಿ ಎತ್ತರ, ಉದ್ದ ಮುಖ, ಅಗಲ ಹಣೆ, ಗೋಧಿ ಮೈ ಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದು, ನೀಲಿ ಬಣ್ಣ- ಕೆಂಪು ಗೆರೆಗಳಿರುವ ತುಂಬು ತೋಳಿನ ಶರ್ಟ್, ಹಳದಿ ಬಣ್ಣ ಬರ್ಮುಡಾ ಧರಿಸಿದ್ದಾರೆ.
ಎಡ ಕೈಯಲ್ಲಿ 15 ಸೆಂ.ಮೀ. ಉದ್ದ 4 ಸೆಂ.ಮೀ. ಅಗಲದ ಬಾಣ ಮತ್ತು ಚಕ್ರವಿರುವ ಹಚ್ಚೆ ಇದೆ. ಈ ಚಹರೆಯ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

