ಚಿಕ್ಕಮಗಳೂರು: ಕೊರೋನಾ ಅನ್ನುವಂತಹ ಸೋಂಕು ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲ ಮಾಡಿತ್ತು. ಇದರ ರೌದ್ರ ನರ್ತನಕ್ಕೆ ಅದೆಷ್ಟೋ ಜನ ಜೀವಗಳನ್ನು ಕಳೆದುಕೊಂಡರು. ನಷ್ಟವೂ ಆಯಿತು. ಇದೀಗ ಕರ್ನಾಟಕದಲ್ಲಿ ಮತ್ತೆ ಕೊರೋನಾ ಅಬ್ಬರ ಶುರುವಾಗಿದೆ. ಚಿಕ್ಕಮಗಳೂರಿನಲ್ಲಿ ಮೊದಲ ಕೇಸ್ ಪತ್ತೆಯಾಗಿದೆ.
ಇಪ್ಪತ್ತೆರಡು ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಕೇರಳದ ಕೊಚ್ಚಿಯಲ್ಲಿ ಕೆಲಸ ಮಾಡುತ್ತಿದ್ದಾತ ತವರೂರಿಗೆ ಆಗಮಿಸಿದಾಗ ಅನಾರೋಗ್ಯ ಸಮಸ್ಯೆ ಕಂಡುಬಂದಿದ್ದು ಪರೀಕ್ಷಿಸಿದಾಗ ಕೊರೋನಾ ಇರುವುದಾಗಿ ದೃಢಪಟ್ಟಿದೆಮ
ಅನೇಕ ಕಡೆ ಕೋವಿಡ್ ಪ್ರಕರಣಗಳು ಈಗಾಗಲೇ ಕಾಣಿಸಿಕೊಂಡಿದ್ದು ಈ ಬಾರಿ ಚಿಕ್ಕಮಗಳೂರಿನಲ್ಲಿ ಕೂಡಾ ಕೇಸ್ ಪತ್ತೆಯಾಗಿದ್ದು ಜನ ಆತಂಕದಲ್ಲಿದ್ದಾರೆ.

